ರಶ್ಯದ ಟ್ಯಾಂಕರ್ ವಶಪಡಿಸಿಕೊಂಡ ಯುಕ್ರೇನ್: ರಶ್ಯದಿಂದ ಎಚ್ಚರಿಕೆ

Update: 2019-07-25 16:44 GMT

ಮಾಸ್ಕೋ, ಜು. 25: ಕಳೆದ ನವೆಂಬರ್‌ನಲ್ಲಿ ರಶ್ಯ ಮತ್ತು ಯುಕ್ರೇನ್ ನೌಕಾಪಡೆಗಳ ನಡುವೆ ಸಂಭವಿಸಿದ ಸಂಘರ್ಷದಲ್ಲಿ ವಹಿಸಿದ ಪಾತ್ರಕ್ಕಾಗಿ ರಶ್ಯದ ಟ್ಯಾಂಕರೊಂದನ್ನು ತಡೆಹಿಡಿದಿರುವುದಾಗಿ ಯುಕ್ರೇನ್ ಹೇಳಿದೆ.

ಇದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ರಶ್ಯ, ಇದರ ಪರಿಣಾಮಗಳನ್ನು ಯುಕ್ರೇನ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

‘‘ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ನ, ಏನು ಸಂಭವಿಸಿದೆ ಎನ್ನುವುದನ್ನು ನಾವು ಪರಿಶೀಲಿಸುತ್ತಿದ್ದೇವೆ’’ ಎಂದು ರಶ್ಯದ ವಿದೇಶ ಸಚಿವಾಲಯದ ವಕ್ತಾರರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಒಂದು ವೇಳೆ ರಶ್ಯನ್ನರನ್ನು ಒತ್ತೆಸೆರೆಯಲ್ಲಿಟ್ಟಿದ್ದರೆ, ಅದನ್ನು ಅಂತರ್‌ರಾಷ್ಟ್ರೀಯ ಕಾನೂನಿನ ಸಾರಾಸಗಟು ಉಲ್ಲಂಘನೆ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಅದರ ಪರಿಣಾಮಗಳನ್ನು ಯುಕ್ರೇನ್ ಶೀಘ್ರದಲ್ಲೇ ಎದುರಿಸುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News