ಕಾಬೂಲ್‌ನಲ್ಲಿ 3 ಸ್ಫೋಟ: 11 ಸಾವು

Update: 2019-07-25 16:49 GMT

ಕಾಬೂಲ್, ಜು. 25: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಗುರುವಾರ ಮೂರು ಬಾಂಬ್‌ಗಳು ಸ್ಫೋಟಿಸಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 45 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದ ಸಶಸ್ತ್ರ ಪಡೆಗಳ ಅಧ್ಯಕ್ಷರು ಕಾಬೂಲ್‌ನಲ್ಲಿ ಅಮೆರಿಕ ಮತ್ತು ನ್ಯಾಟೋದ ಉನ್ನತ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ಈ ಸ್ಫೋಟಗಳು ಸಂಭವಿಸಿವೆ.

ಗಣಿ ಮತ್ತು ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿಗಳನ್ನು ಒಯ್ಯುತ್ತಿದ್ದ ಮಿನಿ ಬಸ್ ಒಂದರ ಸಮೀಪ ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಐವರು ಮಹಿಳೆಯರು ಮತ್ತು ಒಂದು ಮಗು ಮೃತಪಟ್ಟರು.

ಈ ದಾಳಿ ನಡೆದ ರಸ್ತೆಗೆ ಸಮಾನಾಂತರವಾಗಿರುವ ಇನ್ನೊಂದು ರಸ್ತೆಯಲ್ಲಿ ಇನ್ನೊಂದು ಬಾಂಬ್ ಸ್ಫೋಟಿಸಿದಾಗ ಐವರು ಮೃತಪಟ್ಟಿದ್ದಾರೆ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸುಮಾರು 3 ಕಿ.ಮೀ. ದೂರದಲ್ಲಿ ಮೂರನೇ ಸ್ಫೋಟ ನಡೆದಿದ್ದು, ಕನಿಷ್ಠ 17 ನಾಗರಿಕರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News