ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ 150 ವಲಸಿಗರ ಸಾವು

Update: 2019-07-26 17:55 GMT

ಟ್ರಿಪೋಲಿ/ಜಿನೇವ, ಜು. 26: ಲಿಬಿಯ ಕರಾವಳಿಯಲ್ಲಿ ದೋಣಿಯೊಂದು ಮುಳುಗಿ ಸುಮಾರು 150 ಮಂದಿ ಮೃತಪಟ್ಟಿರುವ ಶಂಕೆಯಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಗುರುವಾರ ಹೇಳಿದೆ.

ಇದು ಈ ವರ್ಷ ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದಿರುವ ಅತ್ಯಂತ ಭೀಕರ ದುರಂತವಾಗಿರುವ ಸಾಧ್ಯತೆಯಿದೆ.

 ವಲಸಿಗರು ತುಂಬಾ ಹಿಂದಿನಿಂದಲೂ ಲಿಬಿಯ ಮೂಲಕ ದುರ್ಬಲ ದೋಣಿಯಲ್ಲಿ ಯುರೋಪ್‌ಗೆ ಹೋಗುತ್ತಿದ್ದಾರೆ. ಆದರೆ, ಈ ಪ್ರಯಾಣ ಮತ್ತು ಲಿಬಿಯದಲ್ಲಿ ತಂಗುವ ಅಪಾಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿವೆ. ಮೆಡಿಟರೇನಿಯನ್‌ನಲ್ಲಿ ತಾನು ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಯುರೋಪ್ ಕಡಿಮೆಗೊಳಿಸಿದೆ ಹಾಗೂ ಲಿಬಿಯದಲ್ಲಿ 2011ರ ಬಳಿಕ ಅತ್ಯಂತ ಭೀಕರ ಕಾಳಗ ನಡೆಯುತ್ತಿದೆ.

ಮೆಡಿಟರೇನಿಯನ್ ಸಮುದ್ರದಲ್ಲಿ 150 ಮಂದಿ ಮುಳುಗಿರುವುದಲ್ಲದೆ, 150 ಮಂದಿಯನ್ನು ರಕ್ಷಿಸಿ ಲಿಬಿಯಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಫಿಲಿಪ್ಪೊ ಗ್ರಾಂಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News