ಬ್ರೂಕ್ಲಿನ್: ಗುಂಡುಹಾರಾಟಕ್ಕೆ ಓರ್ವ ಬಲಿ, 11 ಮಂದಿಗೆ ಗಾಯ

Update: 2019-07-28 18:15 GMT

ನ್ಯೂಯಾರ್ಕ್,ಜು.28: ಅಮೆರಿಕದ ಬ್ರೂಕ್ಲಿನ್ ನಗರದಲ್ಲಿ ಶನಿವಾರ ರಾತ್ರಿ ಮೇಲೆ ದುಷ್ಕರ್ಮಿಯೊಬ್ಬ ಮನಬಂದಂತೆ ಗುಡುಹಾರಿಸಿದ್ದು ಕನಿಷ್ಠ ಓರ್ವ ಮೃತಪಟ್ಟು ಇತರ 11 ಮಂದಿ ಗಾಯಗೊಂಡಿದ್ದಾರೆ.

   ಶನಿವಾರ ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಗೆ ಬ್ರೌನ್ಸ್‌ವಿಲ್ ಪ್ರದೇಶದ ಹೆಜ್‌ಮ್ಯಾನ್ ಹಾಗೂ ಕ್ರಿಸ್ಟೋಫರ್ ರಸ್ತೆಗಳ ಇಂಟರ್‌ಸೆಕ್ಷನ್ ಬಳಿ ಗುಂಡು ಹಾರಾಟ ನಡೆದಿರುವುದಾಗಿ ನ್ಯೂಯಾರ್ಕ್ ಡೈಲಿ ನ್ಯೂಸ್ ತಿಳಿಸಿದೆ. ಗುಂಡು ಹಾರಾಟದ ಘಟನೆಗೆ ಸಂಬಂಧಿಸಿ ನ್ಯೂಯಾರ್ಕ್ ನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News