10 ಕೋಟಿಗೂ ಅಧಿಕ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದ ಮಹಿಳೆ!

Update: 2019-07-30 16:14 GMT

ಲಾಸ್ ಏಂಜಲಿಸ್, ಜು. 30: ಹಣಕಾಸು ಸಂಸ್ಥೆ ‘ಕ್ಯಾಪಿಟಲ್ ವನ್’ನಿಂದ 10 ಕೋಟಿಗೂ ಅಧಿಕ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕದ್ದ ಆರೋಪದಲ್ಲಿ ಅಮೆರಿಕದ ಐಟಿ ತಂತ್ರಜ್ಞೆಯೊಬ್ಬರನ್ನು ಸೋಮವಾರ ಬಂಧಿಸಲಾಗಿದೆ.

ಸಿಯಾಟಲ್ ಟೆಕ್ನಾಲಜಿ ಕಂಪೆನಿಯ ಮಾಜಿ ಉದ್ಯೋಗಿ 33 ವರ್ಷದ ಪೈಜ್ ಥಾಮ್‌ಪ್ಸನ್, ಮಾಹಿತಿ ಹಂಚಿಕೆ ತಾಣ ‘ಗಿಟ್‌ಹಬ್’ನಲ್ಲಿ ಈ ಮಾಹಿತಿ ಕಳ್ಳತನದ ಬಗ್ಗೆ ಜಂಭ ಕೊಚ್ಚಿಕೊಂಡ ಬಳಿಕ ಎಫ್‌ಬಿಐ ಏಜಂಟ್‌ಗಳು ಅವರನ್ನು ಬಂಧಿಸಿದರು.

ಇದು ಹಣಕಾಸು ಸಂಸ್ಥೆಯೊಂದರಲ್ಲಿ ಸಂಭವಿಸಿದ ಬೃಹತ್ ಮಾಹಿತಿ ಸೋರಿಕೆಗಳ ಪೈಕಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News