ಕೆಲ್ಲಿ ಕ್ರಾಫ್ಟ್ ವಿಶ್ವಸಂಸ್ಥೆಗೆ ನೂತನ ಅಮೆರಿಕ ರಾಯಭಾರಿ

Update: 2019-08-01 16:01 GMT

ವಾಶಿಂಗ್ಟನ್, ಆ. 1: ಕೆನಡಕ್ಕೆ ಅಮೆರಿಕದ ರಾಯಭಾರಿಯಾಗಿರುವ ಕೆಲ್ಲಿ ಕ್ರಾಫ್ಟ್‌ರನ್ನು ವಿಶ್ವಸಂಸ್ಥೆಗೆ ಅಮೆರಿಕದ ನೂತನ ರಾಯಭಾರಿಯಾಗಿ ಅಮೆರಿಕ ಸೆನೆಟ್ ಬುಧವಾರ ಮಾನ್ಯ ಮಾಡಿದೆ.

ಆದರೆ, ಈ ನೇಮಕವನ್ನು ವಿರೋಧಿಸಿದ ಡೆಮಾಕ್ರಟಿಕ್ ಸಂಸದರು, ಅವರು ಈ ಹುದ್ದೆಗೆ ತೀರಾ ಅನನುಭವಿ ಎಂದು ಬಣ್ಣಿಸಿದರು.

ಬಳಿಕ ಸೆನೆಟ್ ಕ್ರಾಫ್ಟ್‌ರನ್ನು ವಿಶ್ವಸಂಸ್ಥೆ ರಾಯಭಾರಿಯಾಗಿ 56-34 ಮತಗಳ ಅಂತರದಿಂದ ಅನುಮೋದಿಸಿತು. ಸೆನೆಟ್ ಸದಸ್ಯರು ಪಕ್ಷದ ನಿಲುವಿನ ಆಧಾರದಲ್ಲಿ ಮತ ಚಲಾಯಿಸಿದರು.

ಭಾರತ ಮೂಲದ ನಿಕ್ಕಿ ಹೇಲಿ ಕಳೆದ ವರ್ಷದ ಕೊನೆಯಲ್ಲಿ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಹುದ್ದೆಯಿಂದ ಹೊರಬಂದಿದ್ದಾರೆ. ಅಂದಿನಿಂದ ಈ ಹುದ್ದೆ ಖಾಲಿ ಬಿದ್ದಿದೆ.

ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಗುರುವಾರ ಆರಂಭಗೊಂಡ ಆಸಿಯಾನ್ ದೇಶಗಳ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಆತಿಥೇಯ ಥಾಯ್ಲೆಂಡ್‌ನ ವಿದೇಶ ಸಚಿವ ಡಾನ್ ಪ್ರಮುದ್‌ವಿನೈ ಜೊತೆ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News