ಕಾಶ್ಮೀರ ಪ್ರಯಾಣ ರದ್ದು: ನಾಗರಿಕರಿಗೆ ಬ್ರಿಟನ್, ಜರ್ಮನಿ ಸೂಚನೆ

Update: 2019-08-03 16:57 GMT

ಲಂಡನ್, ಆ. 3: ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರಯಾಣಗಳನ್ನು ರದ್ದುಪಡಿಸುವಂತೆ ಬ್ರಿಟನ್ ಮತ್ತು ಜರ್ಮನಿ ಶನಿವಾರ ತಮ್ಮ ನಾಗರಿಕರಿಗೆ ಸೂಚಿಸಿವೆ.

ನಿಮ್ಮ ವಾಸ್ತವ್ಯವನ್ನು ತಕ್ಷಣ ಮೊಟಕುಗೊಳಿಸಿ ಹಿಂದಿರುಗುವಂತೆ ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಸರಕಾರ ಸೂಚಿಸಿದ ಒಂದು ದಿನದ ಬಳಿಕ ಬ್ರಿಟನ್ ಮತ್ತು ಜರ್ಮನಿಗಳು ಈ ಕ್ರಮವನ್ನು ತೆಗೆದುಕೊಂಡಿವೆ.

ಭಯೋತ್ಪಾದಕ ದಾಳಿಯನ್ನು ಸೂಚಿಸುವ ಗುಪ್ತಚರ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಅಭೂತಪೂರ್ವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸರಕಾರ ತಿಳಿಸಿದೆ.

‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಊಹಿಸಲಾಗದ ಬಾಂಬ್ ಸ್ಫೋಟಗಳು, ಗ್ರೆನೇಡ್ ದಾಳಿಗಳು, ಗುಂಡು ಹಾರಾಟ ಮತ್ತು ಅಪಹರಣಗಳು ನಡೆಯುವ ಅಪಾಯವಿದೆ’’ ಎಂದು ಬ್ರಿಟಿಶ್ ವಿದೇಶ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News