ಅಮೆರಿಕದ ಜೊತೆ ಕೈಜೋಡಿಸಲು ಮಿತ್ರ ದೇಶಗಳು ನಾಚಿಕೆ ಪಡುತ್ತಿವೆ: ಇರಾನ್ ಸಚಿವ

Update: 2019-08-05 15:42 GMT

ಟೆಹರಾನ್, ಆ. 5: ಇರಾನ್ ವಿರುದ್ಧ ಅಮೆರಿಕವೊಂದೇ ಹೋರಾಟದಲ್ಲಿ ತೊಡಗಿದೆ ಹಾಗೂ ಕೊಲ್ಲಿಯಲ್ಲಿರುವ ಅಮೆರಿಕದ ಪಡೆಗಳ ಜೊತೆ ಕೈಜೋಡಿಸಲು ಅದರ ಮಿತ್ರದೇಶಗಳು ನಾಚಿಕೆಪಟ್ಟುಕೊಳ್ಳುತ್ತಿವೆ ಎಂದು ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಸೋಮವಾರ ಹೇಳಿದ್ದಾರೆ.

ನನ್ನ ವಿರುದ್ಧ ಅಮೆರಿಕ ದಿಗ್ಬಂಧನಗಳನ್ನು ವಿಧಿಸುವ ಬೆದರಿಕೆಯಿದ್ದರೂ, ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಲು ನೀಡಲಾಗಿದ್ದ ಅವಕಾಶವನ್ನು ನಾನು ತಿರಸ್ಕರಿಸಿದ್ದೇನೆ ಎಂದು ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

  ‘‘ಇಂದು ಅಮೆರಿಕವು ಜಗತ್ತಿನಲ್ಲಿ ಏಕಾಂಗಿಯಾಗಿದೆ. ಮಿತ್ರಕೂಟವೊಂದನ್ನು ರಚಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಅಮೆರಿಕದ ಮಿತ್ರ ದೇಶಗಳು ಅದರ ಜೊತೆ ಮಿತ್ರಕೂಟ ಏರ್ಪಡಿಸಲು ನಾಚಿಕೆ ಪಡುತ್ತಿವೆ’’ ಎಂದು ಝಾರಿಫ್ ನುಡಿದರು.

‘‘ಅವರು ಕಾನೂನು ಮುರಿಯುವ ಮೂಲಕ, ಉದ್ವಿಗ್ನತೆ ಮತ್ತು ಬಿಕ್ಕಟ್ಟುಗಳನ್ನು ಸೃಷ್ಟಿಸುವ ಮೂಲಕ ಈ ಪರಿಸ್ಥಿತಿಗೆ ಒಳಗಾಗಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News