ಭಾರತಕ್ಕೆ ಪರಾರಿಯಾಗಿದ್ದ ಮಾಲ್ದೀವ್ಸ್ ಮಾಜಿ ಉಪಾಧ್ಯಕ್ಷನ ಬಂಧನ

Update: 2019-08-05 16:21 GMT

ಮಾಲೆ (ಮಾಲ್ದೀವ್ಸ್), ಆ. 5: ಸರಕಾರಿ ನಿಧಿಗಳ ಅವ್ಯವಹಾರ ಪ್ರಕರಣದಲ್ಲಿ ವಿಚಾರಣೆಯನ್ನು ತಪ್ಪಿಸಲು ಭಾರತಕ್ಕೆ ಪರಾರಿಯಾಗಿದ್ದ ಮಾಲ್ದೀವ್ಸ್ ಉಪಾಧ್ಯಕ್ಷ ಅಹ್ಮದ್ ಅದೀಬ್‌ರನ್ನು ಮಾಲ್ದೀವ್‌ನಲ್ಲಿ ಬಂಧಿಸಿ ಜೈಲೊಂದಕ್ಕೆ ಕಳುಹಿಸಲಾಗಿದೆ.

ಅದೀಬ್ ಭಾರತ ಪ್ರವೇಶಿಸಲು ಗುರುವಾರ ಅನುಮತಿ ನಿರಾಕರಿಸಲಾಗಿತ್ತು ಹಾಗೂ ಅವರನ್ನು ಮಾಲ್ದೀವ್ಸ್‌ಗೆ ವಾಪಸ್ ಕಳಹಿಸಲಾಗಿತ್ತು.

ಅಹ್ಮದ್ ಅದೀಬ್‌ರನ್ನು ನೌಕಾಪಡೆಯ ಹಡಗೊಂದರಲ್ಲಿ ರವಿವಾರ ರಾತ್ರಿ ಮಾಲ್ದೀವ್ಸ್ ರಾಜಧಾನಿ ಮಾಲೆಗೆ ಕರೆತರಲಾಗಿತ್ತು. ಸೋಮವಾರ ಬೆಳಗ್ಗೆ ಅವರನ್ನು ದೂನಿದೂ ಬಂಧನ ಕೇಂದ್ರಕ್ಕೆ ಸಾಗಿಸಲಾಯಿತು.

ಅದೀಬ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿಯಿರುವ ಹಿನ್ನೆಲೆಯಲ್ಲಿ, ಅವರ ಪಾಸ್‌ಪೋರ್ಟನ್ನು ಮಾಲ್ದೀವ್ಸ್ ಸರಕಾರ ಮುಟ್ಟುಗೋಲು ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಪ್ರಕರಣದಲ್ಲಿ 33 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News