ಚುನಾವಣಾ ಸಭೆಗಳಲ್ಲಿ ಭಾಗವಹಿಸದಂತೆ ಜನರಿಗೆ ತಾಲಿಬಾನ್ ಎಚ್ಚರಿಕೆ

Update: 2019-08-06 16:09 GMT

ಕಾಬೂಲ್, ಆ. 5: ಚುನಾವಣಾ ಸಭೆಗಳಲ್ಲಿ ಭಾಗವಹಿಸದಂತೆ ಅಫ್ಘಾನಿಸ್ತಾನದ ಜನರಿಗೆ ತಾಲಿಬಾನ್ ಎಚ್ಚರಿಕೆ ನೀಡಿದೆ ಹಾಗೂ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಹಿಂದಿನ ಚುನಾವಣೆಗಳ ಅವಧಿಯಲ್ಲೂ ಭಯೋತ್ಪಾದಕ ಗುಂಪುಗಳು ದಾಳಿ ನಡೆಸಿದ್ದವು. ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಅದು ಭಯಾನಕ ಹಿಂಸೆಯನ್ನು ಛೂಬಿಟ್ಟಿದೆ.

‘‘ಚುನಾವಣೆಯೆಂಬ ನಾಟಕ ಮತ್ತು ಪ್ರಹಸನದ ವಿರುದ್ಧ ಹೋರಾಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯಗಳನ್ನು ಬಳಸಿ ಕೆಲಸ ಮಾಡಬೇಕು’’ ಎಂದು ತನ್ನ ಸಂದೇಶದಲ್ಲಿ ತಾಲಿಬಾನ್ ಹೇಳಿದೆ.

ಇದು ದಾಳಿ ನಡೆಸುವಂತೆ ನೀಡಿದ ಸ್ಪಷ್ಟ ಸೂಚನೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News