ಭಾರತೀಯ ಚಿತ್ರಗಳ ನಿಷೇಧ: ಪಾಕಿಸ್ತಾನ

Update: 2019-08-08 16:56 GMT

ಇಸ್ಲಾಮಾಬಾದ್, ಆ. 8: ಪಾಕಿಸ್ತಾನದ ಸಿನೇಮಾ ಮಂದಿರಗಳಲ್ಲಿ ಭಾರತದ ಚಿತ್ರಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗುವುದು ಎಂದು ಆ ದೇಶ ಗುರುವಾರ ತಿಳಿಸಿದೆ.

‘‘ಪಾಕಿಸ್ತಾನದ ಯಾವುದೇ ಸಿನೇಮಾ ಮಂದಿರಗಳಲ್ಲಿ ಭಾರತದ ಯಾವುದೇ ಚಿತ್ರಗಳನ್ನು ಪ್ರದರ್ಶಿಸಲಾಗುವುದಿಲ್ಲ. ನಾಟಕಗಳು, ಚಿತ್ರಗಳು ಮತ್ತು ಈ ಮಾದರಿಯ ಯಾವುದೇ ಭಾರತೀಯ ಕಾರ್ಯಕ್ರಮಗಳನ್ನು ಪಾಕಿಸ್ತಾನದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು’’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ಸಲಹೆಗಾರ ಫಿರ್ದೌಸ್ ಆಶಿಕ್ ಅವನ್ ಟ್ವೀಟೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News