ಕ್ಯಾಲಿಫೋರ್ನಿಯ: ಚೂರಿ ಇರಿತ, ದರೋಡೆ; 4 ಸಾವು

Update: 2019-08-08 17:00 GMT

ಅಟ್ಲಾಂಟ (ಅಮೆರಿಕ), ಆ. 8: ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಲಾಸ್ ಏಂಜಲಿಸ್ ಸಮೀಪ ಎರಡು ಸ್ಥಳಗಳಲ್ಲಿ ನಡೆದ ಚೂರಿ ಇರಿತ ಮತ್ತು ದರೋಡೆ ಪ್ರಕರಣಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಆರೋಪಿ ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿಯ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಲಾಸ್ ಏಂಜಲಿಸ್‌ನಿಂದ ಸುಮಾರು 30 ಮೈಲಿ ದೂರದ ಗಾರ್ಡನ್ ಗ್ರೂವ್ ಮತ್ತು ಸಾಂಟಾ ಅನಾ ಎಂಬ ಸ್ಥಳಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ದಾಂಧಲೆ ನಡೆದಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News