ಚಂಡಮಾರುತ ತಡೆಯಲು ಟ್ರಂಪ್ ನೀಡಿದ್ದ ಸಲಹೆ ಕೇಳಿದರೆ ನಿಮ್ಮ ತಲೆ ತಿರುಗಬಹುದು!

Update: 2019-08-26 17:51 GMT

ವಾಶಿಂಗ್ಟನ್, ಆ. 26: ಚಂಡಮಾರುತಗಳು ಅಮೆರಿಕಕ್ಕೆ ಅಪ್ಪಳಿಸುವ ಮುನ್ನ ಅವುಗಳ ಮೇಲೆ ಪರಮಾಣು ಬಾಂಬ್‌ಗಳನ್ನು ಹಾಕುವ ಸಲಹೆಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ ಎಂದು ‘ಆ್ಯಕ್ಸಿಯೋಸ್’ ರವಿವಾರ ವರದಿ ಮಾಡಿದೆ.

 ಚಂಡಮಾರುತದ ಕೇಂದ್ರ ಬಿಂದುವಿನ ಮೇಲೆ ಪರಮಾಣು ಬಾಂಬನ್ನು ಹಾಕಿದರೆ ಆಫ್ರಿಕಾ ಕರಾವಳಿಯಲ್ಲಿ ಚಂಡಮಾರುತಗಳು ರೂಪುಗೊಳ್ಳುವುದನ್ನು ತಡೆಯಲು ಸಾಧ್ಯವಾಗಬಹುದೇ ಎಂಬ ಪ್ರಶ್ನೆಯೊಂದನ್ನು ಚಂಡಮಾರುತ ನಿಭಾಯಿಸುವ ಕುರಿತ ಸಭೆಯೊಂದರಲ್ಲಿ ಟ್ರಂಪ್ ಕೇಳಿದ್ದರು ಎಂದು ಅದು ಬರೆದಿದೆ.

ಯಾವ ಸಭೆಯಲ್ಲಿ ಅವರು ಈ ಪ್ರಶ್ನೆ ಕೇಳಿದ್ದಾರೆ ಎನ್ನುವುದನ್ನು ಆ್ಯಕ್ಸಿಯೋಸ್ ತಿಳಿಸಿಲ್ಲ.

ಟ್ರಂಪ್ ಇಂಥ ಸಲಹೆಯನ್ನು ನೀಡಿರುವುದು ಮೊದಲ ಬಾರಿಯೇನಲ್ಲ ಎನ್ನಲಾಗಿದೆ. 2017ರಲ್ಲಿ, ಚಂಡಮಾರುತಗಳು ಭೂಮಿಗೆ ಅಪ್ಪಳಿಸದಂತೆ ತಡೆಯಲು ಅವುಗಳ ಮೇಲೆ ಬಾಂಬ್ ಹಾಕಬಹುದೇ ಎಂಬ ಪ್ರಶ್ನೆಯನ್ನು ಅವರು ಹಿರಿಯ ಅಧಿಕಾರಿಯೊಬ್ಬರಿಗೆ ಕೇಳಿದ್ದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಲು ಶ್ವೇತಭವನ ನಿರಾಕರಿಸಿದೆ. ಆದರೆ, ಟ್ರಂಪ್‌ರ ಉದ್ದೇಶ ಒಳ್ಳೆಯದೇ ಆಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News