ನನ್ನ ಸಂಧಾನವೇ ಹಾಗೆ: ಚೀನಾ ಜೊತೆಗಿನ ವ್ಯಾಪಾರ ಮಾತುಕತೆಗೆ ಪ್ರತಿಕ್ರಿಯಿಸಿದ ಟ್ರಂಪ್

Update: 2019-08-27 14:27 GMT

ಬಿಯಾರಿಟ್ಝ್ (ಫ್ರಾನ್ಸ್), ಆ. 27: ಜಾಗತಿಕ ಆರ್ಥಿಕ ಅಸ್ಥಿರತೆ ಕುರಿತ ಕಳವಳಗಳನ್ನು ಸೋಮವಾರ ತಳ್ಳಿ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರ ಒಪ್ಪಂದಕ್ಕಾಗಿ ಚೀನಾದ ಜೊತೆ ತಾನು ವ್ಯವಹರಿಸುತ್ತಿರುವ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವಿಧಾನವನ್ನು ಅನುಸರಿಸಿ ನಾನು ವ್ಯಾಪಾರದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಒಂದು ದಿನ ಹೊಗಳುವ ಮತ್ತು ಇನ್ನೊಂದು ದಿನ ಖಂಡಿಸುವ ಅವರ ತಂತ್ರಗಾರಿಕೆಯ ಬಗ್ಗೆ ಇಲ್ಲಿ ನಡೆದ ಜಿ-7 ಶೃಂಗ ಸಭೆಯ ಅಂತ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಟ್ರಂಪ್‌ರ ಈ ತಂತ್ರಗಾರಿಕೆಯು ತಮಗೆ ಹಾಗೂ ಇತರ ದೇಶಗಳಿಗೆ ಅಸ್ಥಿರತೆ ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಎಂದು ಅಮೆರಿಕದ ಮಿತ್ರ ದೇಶಗಳು ದೂರುತ್ತಿವೆ ಎಂದು ಪ್ರಶ್ನೆ ಕೇಳಿದ ವರದಿಗಾರ ಹೇಳಿದರು.

‘‘ಕ್ಷಮಿಸಿ, ನಾನು ಸಂಧಾನ ಮಾಡುವುದೇ ಹಾಗೆ’’ ಎಂದು ಅದಕ್ಕೆ ಟ್ರಂಪ್ ಉತ್ತರಿಸಿದರು.

ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ತೆರಿಗೆಗಳು ಆ ದೇಶವನ್ನು ಕೆಟ್ಟದಾಗಿ ಬಾಧಿಸುತ್ತಿದ್ದು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News