370ನೇ ವಿಧಿ ರದ್ದತಿ: ಭಾರತದ ಆಂತರಿಕ ವಿಚಾರ

Update: 2019-09-01 17:02 GMT

   ಲಂಡನ್,ಸೆ.1: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತ ಸರಕಾರದ ಕ್ರಮವು, ಭಾರತದ ಆಂತರಿಕ ವಿಷಯವಾಗಿದೆ ಹಾಗೂ ಆ ನಿರ್ಧಾರಕ್ಕೆ ಭಾರತದ ಜನತೆಯ ಅಭೂತಪೂರ್ವ ಬೆಂಬಲವಿದೆಯೆಂದು ಪಾಕಿಸ್ತಾನದ ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) ಪಕ್ಷದ ಸಂಸ್ಥಾಪಕ ಅಲ್ತಾಫ್ ಹುಸೈನ್ ತಿಳಿಸಿದ್ದಾರೆ.

    65 ಹುಸೈನ್ ಅವರು 1990ರಲ್ಲಿ ಪಾಕಿಸ್ತಾನದಿಂದ ದೇಶಭ್ರಷ್ಟರಾದ ಬಳಿಕ ಬ್ರಿಟನ್‌ನ ಪೌರತ್ವ ಪಡೆದಿದ್ದರು. ಪಾಕಿಸ್ತಾನದ ಬೃಹತ್ ರಾಜಕೀಯ ಪಕ್ಷಗಳಲ್ಲಿ ಒಂದಾದ ಎಂಕ್ಯೂಎಂ ಮೇಲೆ ಅವರು ಈಗಲೂ ಬಲವಾದ ಹಿಡಿತವನ್ನು ಹೊಂದಿದ್ದಾರೆ.

‘‘ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸುವ ಭಾರತ ಸರಕಾರದ ಕ್ರಮಕ್ಕೆ ಭಾರತೀಯರ ಅಭೂತಪೂರ್ವ ಬೆಂಬಲ ದೊರೆತಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ಧೈರ್ಯವಿದ್ದಲ್ಲಿ, ಅದು ಕೂಡಾ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ವನ್ನು ವಶಪಡಿಸಿಕೊಳ್ಳಲಿ’’ ಎಂದು ಹುಸೈನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News