ಶಾಲೆಯಲ್ಲಿ 8 ಮಕ್ಕಳನ್ನು ಚೂರಿಯಿಂದ ಇರಿದು ಕೊಂದ ಪಾತಕಿ

Update: 2019-09-03 14:47 GMT

ಬೀಜಿಂಗ್, ಸೆ. 3: ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡ ವ್ಯಕ್ತಿಯೋರ್ವ ನಡೆಸಿದ ಭೀಕರ ಚೂರಿ ದಾಳಿಯಲ್ಲಿ ಮಧ್ಯ ಚೀನಾದ ಪ್ರಾಥಮಿಕ ಶಾಲೆಯೊಂದರ ಎಂಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಹುಬೈ ಪ್ರಾಂತದ ಎಂಶಿ ಕೌಂಟಿಯ ಬೈಯಾಂಗ್‌ಪಿಂಗ್ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಈ ದಾಳಿ ನಡೆದಿದೆ. ದಾಳಿ ನಡೆದ ದಿನ ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವಾಗಿತ್ತು.

ಆರೋಪಿಯಾಗಿರುವ 40 ವರ್ಷದ ಸ್ಥಳೀಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಆರೋಪಿಯು ತನ್ನ ಪ್ರಿಯತಮೆಯ ಕಣ್ಣುಗಳನ್ನು ಕಿತ್ತುಹಾಕಲು ಪ್ರಯತ್ನಿಸಿದ ಆರೋಪದಲ್ಲಿ ಎಂಟು ವರ್ಷಗಳ ಕಾಲ ಜೈಲಿನಲ್ಲಿದ್ದನು. ಅವನನ್ನು ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News