ಡೊರಿಯನ್ ಚಂಡಮಾರುತಕ್ಕೆ ಬಹಾಮಸ್‌ನಲ್ಲಿ 5 ಬಲಿ

Update: 2019-09-03 14:59 GMT

ಪೋರ್ಟ್ ಸೇಂಟ್ ಲೂಸೀ (ಅಮೆರಿಕ), ಸೆ. 3: ಡೊರಿಯನ್ ಚಂಡಮಾರುತದ ಆರ್ಭಟಕ್ಕೆ ಬಹಾಮಸ್ ದೇಶದಲ್ಲಿ ಐವರು ಬಲಿಯಾಗಿದ್ದಾರೆ ಎಂದು ಪ್ರಧಾನಿ ಹ್ಯೂಬರ್ಟ್ ಮಿನ್ನಿಸ್ ಸೋಮವಾರ ಹೇಳಿದ್ದಾರೆ.

ಬಹಾಮಸ್‌ನಲ್ಲಿ ರವಿವಾರ ಚಂಡಮಾರುತದ ಪರಿಣಾಮವಾಗಿ ಭೀಕರ ಬಿರುಗಾಳಿ ಬೀಸಿದೆ ಮತ್ತು ಅಗಾಧ ಪ್ರಮಾಣದಲ್ಲಿ ಮಳೆ ಸುರಿದಿದೆ.

ನ್ಯೂ ಪ್ರಾವಿಡೆನ್ಸ್‌ನಲ್ಲಿರುವ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣೆ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿನ್ನಿಸ್, ಗಂಟೆಗೆ 395 ಕಿ.ಮೀ. ವೇಗದಲ್ಲಿ ಬೀಸಿದ ಬಿರುಗಾಳಿಯು ದ್ವೀಪ ಸಮೂಹದಲ್ಲಿ ವಿನಾಶಗಳ ಸರಮಾಲೆಯನ್ನೇ ಸೃಷ್ಟಿಸಿದೆ ಎಂದು ಹೇಳಿದರು.

ಬಹಾಮಸ್ ದೇಶದ ಅಬಾಕೊ ದ್ವೀಪದಲ್ಲಿ ರವಿವಾರ ಚಂಡಮಾರುತವು ದಾಂಧಲೆ ನಡೆಸಿದೆ. ಚಂಡಮಾರುತವು ಸೋಮವಾರ ಗ್ರಾಂಡ್ ಬಹಾಮದತ್ತ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News