ಪಾಕಿಸ್ತಾನ: ಪೊಲೀಸ್ ಅಧಿಕಾರಿಯಾಗಿ ಪ್ರಪ್ರಥಮ ಹಿಂದೂ ಮಹಿಳೆ ನೇಮಕ

Update: 2019-09-04 15:09 GMT

ಇಸ್ಲಾಮಾಬಾದ್, ಸೆ. 4: ಮೊದಲ ಬಾರಿಗೆ, ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂದು ‘ಜಿಯೋ ನ್ಯೂಸ್’ ಬುಧವಾರ ವರದಿ ಮಾಡಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪುಷ್ಪಾ ಅವರನ್ನು ಸಿಂಧ್‌ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ನೇಮಿಸಲಾಗಿದೆ.

ಈ ನೇಮಕಾತಿಯನ್ನು ಮಾನವಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್ ಮಂಗಳವಾರ ತನ್ನ ಟ್ವಿಟರ್ ಖಾತೆಯಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ಇನ್ನೋರ್ವ ಪಾಕಿಸ್ತಾನಿ ಹಿಂದೂ ಮಹಿಳೆ ಸುಮನ್ ಪವನ್ ಬೊಡಾನಿಯನ್ನು ಜನವರಿಯಲ್ಲಿ ಸಿವಿಲ್ ಮತ್ತು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಿಸಲಾಗಿತ್ತು.

ಪಾಕಿಸ್ತಾನದಲ್ಲಿ ಸುಮಾರು 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಿಂಧ್ ಪ್ರಾಂತದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News