ಇಂಡೋನೇಶ್ಯದಲ್ಲಿ ತೀವ್ರ ಭೂಕಂಪ

Update: 2019-09-26 06:47 GMT

ಜಕಾರ್ತ, ಸೆ.26: ಪೂರ್ವ ಇಂಡೋನೇಶ್ಯದ ಮಲುಕು ದ್ವೀಪದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.

 ಸ್ಥಳೀಯ ಕಾಲಮಾನ ಬೆಳಗ್ಗೆ 8:46ರಕ್ಕೆ ಮಲುಕು ಪ್ರಾಂತ್ಯದಿಂದ 37 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದೆ. ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ 29 ಕಿ.ಮೀ.ಆಳದಲ್ಲಿ ಭೂಕಂಪನ ಸಂಭವಿಸಿದೆ.

ಬಿರುಕು ಬಿಟ್ಟಿರುವ ರಸ್ತೆಗಳು ಹಾಗೂ ನೆಲಸಮಗೊಂಡಿರುವ ಕಟ್ಟಡಗಳ ಚಿತ್ರ ಹಾಗೂ ವಿಡಿಯೋವನ್ನು ದೇಶದ ವಿಪತ್ತು ನಿರ್ವಹಣೆ ಇಲಾಖೆ ಬಿಡುಗಡೆ ಮಾಡಿದ್ದು, ಭೂಕಂಪದಿಂದ ಈ ಸಾವು-ನೋವಿನ ಕುರಿತು ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News