ಪರಿಸರ ಚಳವಳಿ ವಿಶ್ವ ನಾಯಕರಿಗೆ ತಲೆನೋವಾಗಿದೆ: 5 ಲಕ್ಷ ಜನರ ರ್ಯಾಲಿಯಲ್ಲಿ ಗ್ರೆಟಾ ತನ್‌ಬರ್ಗ್

Update: 2019-09-28 17:10 GMT

 ಮಾಂಟ್ರಿಯಲ್ (ಕೆನಡ), ಸೆ. 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಕೆಲವು ವಿಶ್ವ ನಾಯಕರು ಪರಿಸರ ಪರ ಹೋರಾಟಕ್ಕಾಗಿ ಮಕ್ಕಳನ್ನು ತಮಾಷೆ ಮಾಡುವುದು, ‘‘ನನ್ನ ಪರಿಸರ ಸಂದೇಶ ಅವರಿಗೆ ನಿಭಾಯಿಸಲಾಗದಷ್ಟು ಬೃಹತ್ತಾಗಿ ಬೆಳೆದಿದೆ ಎನ್ನುವುದನ್ನು ಸೂಚಿಸುತ್ತದೆ’’ ಎಂದು ಹದಿಹರೆಯದ ಪರಿಸರ ಕಾರ್ಯಕರ್ತೆ ಸ್ವೀಡನ್‌ನ ಗ್ರೆಟಾ ತನ್‌ಬರ್ಗ್ ಹೇಳಿದ್ದಾರೆ.

ಕೆನಡದ ಮಾಂಟ್ರಿಯಲ್ ನಗರದಲ್ಲಿ ಶುಕ್ರವಾರ ನಡೆದ ಬೃಹತ್ ಪರಿಸರ ರ್ಯಾಲಿಯಲ್ಲಿ ಮಾತನಾಡಿದ 16 ವರ್ಷದ ಪರಿಸರ ಹೋರಾಟಗಾರ್ತಿ, ವಿಶ್ವ ನಾಯಕರು ತಮ್ಮ ಪೊಳ್ಳು ಮಾತುಗಳು ಮತ್ತು ಅಸಮರ್ಪಕ ಯೋಜನೆಗಳ ಮೂಲಕ ಯುವಜನರನ್ನು ನಿರಾಶೆಗೊಳಿಸಿದ್ದಾರೆ ಎಂದು ಹೇಳಿದರು.

‘‘ಇಂದು ನಾವು ಲಕ್ಷಾಂತರ ಜನರು ವಿಶ್ವಾದ್ಯಂತ ಮುಷ್ಕರ ಮತ್ತು ಮೆರವಣಿಗೆಗಳನ್ನು ನಡೆಸುತ್ತಿದ್ದೇವೆ. ಅವರು ನಮ್ಮ ಮಾತುಗಳನ್ನು ಕೇಳುವವರೆಗೆ ನಾವು ಇದನ್ನು ಮಾಡುತ್ತಲೇ ಇರುತ್ತೇವೆ’’ ಎಂದು ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಸುಮಾರು 5 ಲಕ್ಷ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News