ಟ್ರಕ್ ಗೆ ಢಿಕ್ಕಿ ಹೊಡೆದ ಬಸ್: 36 ಸಾವು

Update: 2019-09-29 18:26 GMT

ಶಾಂಘೈ, ಸೆ.29: ಚೀನಾದ ಜಿಯಾಂಗ್ಸು ಪ್ರಾಂತದಲ್ಲಿ ಬಸ್ಸೊಂದು ಎರಡು ರಸ್ತೆಗಳನ್ನು ವಿಭಜಿಸುವ ತಡೆಗೋಡೆಯನ್ನು ಮುರಿದು, ಎದುರು ದಿಕ್ಕಿನಿಂದ ಆಗಮಿಸುತ್ತಿದ್ದ ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ.

  ಬಸ್‌ನ ಮುಂಭಾಗದ ಎಡ ಟಯರ್ ಸವೆದಿದ್ದ ಕಾರಣ ಅವಘಡ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖಾ ವರದಿ ತಿಳಿಸಿರುವುದಾಗಿ ಕ್ಸಿನುವಾ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

ದುರಂತದಲ್ಲಿ ಇತರ 36 ಮಂದಿ ಗಾಯಗೊಂಡಿದ್ದು, ಅವರಲ್ಲಿ 9 ಮಂದಿಯ ಪರಿಸ್ಥಿತಿ ಗಂಭೀರವಾಗಿದೆಯೆಂದು ಹೇಳಿಕೆ ತಿಳಿಸಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತುರ್ತುಸ್ಥಿತಿ ನಿರ್ವಹಣಾ ತಂಡವನ್ನು ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News