‘ಬೋಯಿಂಗ್ 737 ಮ್ಯಾಕ್ಸ್‌ನಿಂದ ಸುರಕ್ಷತಾ ಕ್ರಮಗಳನ್ನು ಕೈಬಿಟ್ಟಿತ್ತು’

Update: 2019-09-30 17:39 GMT

ನ್ಯೂಯಾರ್ಕ್, ಸೆ. 30: ಬೋಯಿಂಗ್ ಕಂಪೆನಿಯು ತನ್ನ 737 ಮ್ಯಾಕ್ಸ್ ವಿಮಾನದ ಆ್ಯಂಟಿ-ಸ್ಟಾಲ್ ವ್ಯವಸ್ಥೆಯಿಂದ ಕೆಲವು ‘ಮಹತ್ವದ ಸುರಕ್ಷತಾ ಕ್ರಮಗಳನ್ನು’ ಕೈಬಿಟ್ಟಿತ್ತು ಹಾಗೂ ಈ ಸುರಕ್ಷತಾ ಕ್ರಮಗಳನ್ನು ಸೇನಾ ಟ್ಯಾಂಕರ್ ವಿಮಾನದಲ್ಲಿ ಬಳಸಲಾದ ಆ್ಯಂಟಿ-ಸ್ಟಾಲ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ರವಿವಾರ ವರದಿ ಮಾಡಿದೆ.

ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ಎರಡು ವಿಮಾನಗಳ ಪತನಕ್ಕೆ ಎಂಸಿಎಎಸ್ ಆ್ಯಂಟಿ-ಸ್ಟಾಲ್ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂಬುದಾಗಿ ನಿರ್ಧರಿಸಲಾಗಿದೆ.

ಇಂಡೋನೇಶ್ಯ ಮತ್ತು ಇಥಿಯೋಪಿಯಗಳಲ್ಲಿ ನಡೆದ 737 ಮ್ಯಾಕ್ಸ್ ವಿಮಾನಗಳ ಪತನದಲ್ಲಿ ಒಟ್ಟು 346 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News