ಲೇಬರ್ ಪಕ್ಷದ ಕಾಶ್ಮೀರ ನಿರ್ಣಯ ಹಿಂದಕ್ಕೆ ಪಡೆಯಲು ಯತ್ನ

Update: 2019-10-04 18:00 GMT

ಲಂಡನ್, ಅ. 4: ಕಳೆದ ವಾರ ನಡೆದ ಲೇಬರ್ ಪಕ್ಷದ ವಾರ್ಷಿಕ ಸಮಾವೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅಂಗೀಕರಿಸಲಾದ ನಿರ್ಣಯವನ್ನು ವಾಪಸ್ ಪಡೆಯುವ ಪ್ರಯತ್ನವೊಂದನ್ನು ಪಕ್ಷದ ಹಲವು ನಾಯಕರು ಆರಂಭಿಸಿದ್ದಾರೆ.

ಪಕ್ಷ ಅಂಗೀಕರಿಸಿದ ನಿರ್ಣಯವು ಇಲ್ಲಿನ ಭಾರತೀಯ ಸಮುದಾಯದ ಅತೃಪ್ತಿಗೆ ಕಾರಣವಾಗಿದೆ ಹಾಗೂ ಇಲ್ಲಿ ಇತ್ತೀಚೆಗೆ ನಡೆದ ಪಕ್ಷ ಮತ್ತು ಅದರ ಸಂಸದರ ಕಾರ್ಯಕ್ರಮಗಳಿಗೆ ಬಹಿಷ್ಕಾರ ಎದುರಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವ ನಿರ್ಣಯವೊಂದನ್ನು ಲೇಬರ್ ಪಕ್ಷವು ಅಂಗೀಕರಿಸಿತ್ತು.

ನಿರ್ಣಯವು ತಪ್ಪು ಮಾಹಿತಿಯನ್ನು ಆಧರಿಸಿದೆ ಹಾಗೂ ಅದರಿಂದ ಪ್ರಯೋಜನವಾಗಿಲ್ಲ ಎಂದು ಭಾರತ ಮೂಲದ ಹಿರಿಯ ಲೇಬರ್ ಸಂಸದ ಕೀತ್ ವಾಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News