ಇಂಡೋನೇಶ್ಯ: ರಕ್ಷಣಾ ಸಚಿವಗೆ ಚೂರಿ ಇರಿತ

Update: 2019-10-10 18:09 GMT

ಜಕಾರ್ತ (ಇಂಡೋನೇಶ್ಯ), ಅ. 10: ಇಂಡೋನೇಶ್ಯದಲ್ಲಿ ಗುರುವಾರ ಶಂಕಿತ ಐಸಿಸ್ ಭಯೋತ್ಪಾದಕನೊಬ್ಬ ದೇಶದ ಮುಖ್ಯ ರಕ್ಷಣಾ ಸಚಿವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ.

ರಕ್ಷಣಾ ಸಚಿವ ವಿರಾಂಟೊ ಜಾವಾ ದ್ವೀಪದಲ್ಲಿರುವ ಪಾಂಡೆಗ್ಲಾಂಗ್ ವಿಶ್ವವಿದ್ಯಾನಿಲಯದ ಹೊರಗೆ ಕಾರಿನಿಂದ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರ ಹೊಟ್ಟೆಗೆ ಎರಡು ಬಾರಿ ಇರಿಯಲಾಗಿದೆ. ಈ ಘಟನೆಯಲ್ಲಿ ಇತರ ಮೂವರಿಗೂ ಗಾಯವಾಗಿದೆ.

ಭದ್ರತಾ ಸಿಬ್ಬಂದಿ ಓರ್ವ ಪುರುಷ ಮತ್ತು ಓರ್ವ ಮಹಿಳೆಯೊಂದಿಗೆ ಸೆಣಸಾಡಿ ಅವರನ್ನು ನೆಲಕ್ಕೆ ಕೆಡವುತ್ತಿರುವುದನ್ನು ಟೆಲಿವಿಶನ್ ಚಿತ್ರಗಳು ತೋರಿಸಿವೆ.

‘‘ಯಾರೋ ಒಬ್ಬರು ಅವರ ಹತ್ತಿರ ಬಂದು ದಾಳಿ ಮಾಡಿದರು’’ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ದೆಡಿ ಪ್ರಸೆಟ್ಯೊ ಹೇಳಿದರು. ದಾಳಿಕೋರ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ ಎಂದರು.

ಮಾಜಿ ಸೇನಾ ಜನರಲ್ ಆಗಿರುವ 72 ವರ್ಷದ ಸಚಿವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ಅವರು ದಾಖಲಾಗಿರುವ ಆಸ್ಪತ್ರೆಯ ವಕ್ತಾರರೊಬ್ಬರು ಹೇಳಿದರು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ ಅವರು ಪ್ರಜ್ಞೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News