ಇರಾಕ್ ಪ್ರಧಾನಿಯನ್ನು ಕೆಳಗಿಳಿಸಲು ರಾಜಕೀಯ ನಾಯಕರಿಂದ ಸಿದ್ಧತೆ

Update: 2019-10-30 16:53 GMT

ಬಗ್ದಾದ್ (ಇರಾಕ್), ಅ. 30: ಇರಾಕ್ ಸರಕಾರದ ವಿರುದ್ಧದ ಪ್ರತಿಭಟನೆ ತೀವ್ರತೆಯನ್ನು ಪಡೆದುಕೊಳ್ಳುತ್ತಿರುವಂತೆಯೇ, ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುವುದಾಗಿ ಪ್ರಧಾನಿಯ ಇಬ್ಬರು ಪ್ರಮುಖ ಬೆಂಬಲಿಗರು ಭರವಸೆ ನೀಡಿದ್ದಾರೆ.

ಸಂಸತ್ತಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಜನಪ್ರಿಯ ಶಿಯಾ ನಾಯಕ ಮುಕ್ತಾದ ಅಲ್ ಸದರ್, ಮಧ್ಯಂತರ ಚುನಾವಣೆಯನ್ನು ನಡೆಸುವಂತೆ ಪ್ರಧಾನಿ ಮಹ್ದಿಗೆ ಕರೆ ನೀಡಿದ್ದಾರೆ.

ಇದನ್ನು ಪ್ರಧಾನಿ ತಿರಸ್ಕರಿಸಿದಾಗ, ಅವರನ್ನು ಕೆಳಗಿಳಿಸಲು ಸಹಾಯ ಮಾಡುವಂತೆ ಮುಕ್ತಾದ ಸದರ್ ತನ್ನ ಪ್ರಮುಖ ರಾಜಕೀಯ ಎದುರಾಳಿ ಹದಿ-ಅಲ್- ಅಮೀರಿಯನ್ನು ಕೋರಿದ್ದಾರೆ.

ಇರಾಕ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ, ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದಾಗ ಹಾಗೂ ಇರಾನ್ ಬೆಂಬಲಿತ ಸಶಸ್ತ್ರ ಗುಂಪೊಂದು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದಾಗ ಕನಿಷ್ಠ 40 ಪ್ರತಿಭಟನಕಾರರು ಪ್ರಾಣ ಕಳೆದುಕೊಂಡಿದ್ದಾರೆ.

ಸರಕಾರದ ಭ್ರಷ್ಟಾಚಾರ ಮತ್ತು ಜನರ ಆರ್ಥಿಕ ಸಂಕಷ್ಟದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೀರಿ ನೇತೃತ್ವದ ಗುಂಪು ಇರಾಕ್ ಸಂಸತ್ತಿನಲ್ಲಿ ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News