ಬೋರ್ ವೆಲ್ ಗೆ ಬಿದ್ದ ಐದರ ಹರೆಯದ ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್

Update: 2019-11-04 05:25 GMT

ಚಂಡೀಗಢ , ನ.4: ಹರ್ಯಾಣದ ಕರ್ನಾಲ್ ಜಿಲ್ಲೆಯ ಹರ್ಸಿಂಗ್‌ಪುರ ಗ್ರಾಮದಲ್ಲಿ 50 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ 5 ವರ್ಷದ ಬಾಲಕಿಯನ್ನು ಎನ್ ಡಿ ಆರ್ ಎಫ್ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

 ಘರೌಂಡಾ ಪ್ರದೇಶದಲ್ಲಿ ರವಿವಾರ  ಹೊಲದಲ್ಲಿ ಬಾಲಕಿ  ಆಡುತ್ತಿದ್ದಾಗ  ತನ್ನ ಕುಟುಂಬಕ್ಕೆ ಸೇರಿದ ಬೋರ್ ವೆಲ್ ನೊಳಗೆ ಬಿದ್ದಿದ್ದಾಳೆ. ಈ ಬಗ್ಗೆ ಎನ್ ಡಿ ಆರ್ ಎಫ್ ಗೆ ಮಾಹಿತಿ ನೀಡಲಾಗಿತ್ತು.

ಬಾಲಕಿ ಕಾಣೆಯಾಗಿರುವುದು ಹೆತ್ತವರ ಗಮನಕ್ಕೆ ಬಂದಾಗ ಅವರು ಮಗುವಿಗಾಗಿ  ಹುಡುಕಾಟವನ್ನು ಪ್ರಾರಂಭಿಸಿದರು, ಆದರೆ ನಂತರ ಅವಳು ಬೋರ್ ವೆಲ್ ನೊಳಗೆ ಬಿದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ.

ಹೆತ್ತವರು  ಕ್ಯಾಮರಾವನ್ನು ಬಳಸಿ ಮಗು ಬೋರ್ ವೆಲ್ ನಲ್ಲಿರುವುದನ್ನು ದೃಢಪಡಿಸಿದ್ದರು. ಬಳಿಕ ಬೋರ್‌ವೆಲ್‌ನೊಳಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News