ಸಾಮೂಹಿಕ ಪ್ರಾರ್ಥನೆಗಳು ಬೇಡ: ಇಮಾಮ್‌ಗಳಿಗೆ ಅಲಿಗಡದ ಮುಖ್ಯ ಮುಫ್ತಿ ಕರೆ
ಅಲಿಗಡ (ಉ.ಪ್ರ),ಮಾ.26: ಅಲಿಗಡದ ಮುಖ್ಯ ಮುಫ್ತಿ ಮೌಲಾನಾ ಮುಹಮ್ಮದ್ ಖಾಲಿದ್ ಹಮೀದ್ ಅವರು ಕೊರೋನವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ದೈನಂದಿನ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸದಂತೆ ಅಲಿಗಡ ಜಿಲ್ಲೆಯಲ್ಲಿನ ಎಲ್ಲ ಮಸೀದಿಗಳ ಮುತವಾಲಿಗಳು (ಉಸ್ತುವಾರಿಗಳು) ಮತ್ತು ಇಮಾಮ್‌ಗಳಿಗೆ ಗುರುವಾರ ಆದೇಶವನ್ನು ಹೊರಡಿಸಿದ್ದಾರೆ.
ಅತ್ಯಂತ ವಿಶೇಷ ತಾತ್ಕಾಲಿಕ ಕ್ರಮವಾಗಿ ಮುಸ್ಲಿಮರು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಳನ್ನು ಸಲ್ಲಿಸುವುದರಿಂದ ದೂರವಿರಬೇಕು, ಬದಲಿಗೆ ಮಧ್ಯಾಹ್ನದ ಪ್ರಾರ್ಥನೆಯನ್ನು ತಮ್ಮ ಮನೆಗಳಲ್ಲಿಯೇ ಸಲ್ಲಿಸಬೇಕು ಎಂದು ವೌಲಾನಾ ಕೋರಿದ್ದಾರೆ.
ಇಮಾಮ್ ಮತ್ತು ನಿವಾಸಿ ಉಸ್ತುವಾರಿಗಳು ಮಾತ್ರ ಮಸೀದಿಯೊಳಗೆ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಮತ್ತು ಆ ಪ್ರದೇಶದ ನಿವಾಸಿಗಳು ತಮ್ಮ ಮನೆಗಳಲ್ಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಅವರು ಎಲ್ಲ ಇಮಾಮ್‌ಗಳಿಗೆ ನಿರ್ದೇಶ ನೀಡಿದ್ದಾರೆ.
ಸಣ್ಣ ಮೊಹಲ್ಲಾ ಮಸೀದಿಯಿದ್ದರೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೀಮಿತ ಸಮಾವೇಶವು ಪ್ರಾರ್ಥನೆ ಸಲ್ಲಿಸುವುದನ್ನು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.