ಕಬರ್ ಸ್ತಾನದ ಟ್ರಸ್ಟಿಗಳಿಂದ ದಫನಕ್ಕೆ ಅವಕಾಶ ನಿರಾಕರಣೆ: ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ದಹನ

Update: 2020-04-02 11:17 GMT

ಮುಂಬೈ: ಮೃತದೇಹವನ್ನು ದಫನ ಮಾಡಲು ದಫನ ಭೂಮಿಯ ಟ್ರಸ್ಟಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ 65 ವರ್ಷದ ಕೊರೋನ ಪೀಡಿತ ಮುಸ್ಲಿಂ ವ್ಯಕ್ತಿಯೊಬ್ಬರ ಮೃತದೇಹವನ್ನು ದಹಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮುಂಬೈಯ ಮಲಾಡ್ ನಲ್ಲಿ ಈ ಘಟನೆ ನಡೆದಿದೆ.

ಬುಧವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊರೋನ ವೈರಸ್ ನಿಂದ ಬಳಲುತ್ತಿದ್ದ ವ್ಯಕ್ತಿ ಮಲ್ವಾನಿಯ ಕಲೆಕ್ಟರ್ ಕಾಂಪೌಂಡ್ ನಿವಾಸಿಯಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದಿದ್ದರು.

ಮಲಾಡ್ ಮಲ್ವಾದ್ನಿ ಕಬರ್ ಸ್ತಾನದ ಟ್ರಸ್ಟಿಗಳು ಮೃತದೇಹವನ್ನು ಹೂಳಲು ಅವಕಾಶ ನೀಡಿಲ್ಲ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಕೂಡ ಮೃತದೇಹ ಹೂಳಲು ಅವಕಾಶ ನೀಡಿದ್ದರು. ಸ್ಥಳೀಯ ಪೊಲೀಸರು ಮತ್ತು ರಾಜಕಾರಣಿಗಳು ಮಾತುಕತೆ ನಡೆಸಿದರೂ ಟ್ರಸ್ಟಿಗಳು ಒಪ್ಪಲಿಲ್ಲ ಎಂದು ದೂರಲಾಗಿದೆ.

ನಂತರ ಕೆಲ ಸಾಮಾಜಿಕ ಕಾರ್ಯಕರ್ತರು ಮಾತುಕತೆ ನಡೆಸಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News