ಲಾಕ್ ಡೌನ್ ಉಲ್ಲಂಘಿಸಿ ಶಿರಡಿಯಲ್ಲಿ ರಾಮನವಮಿ ಆಚರಣೆ: ವಿಡಿಯೋ ವೈರಲ್

Update: 2020-04-02 18:22 GMT

ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆಯಾಗಿದ್ದು, ಶಿರಡಿಯಲ್ಲಿ ರಾಮನವಮಿ ಆಚರಣೆ ನಡೆಸಿ ಲಾಕ್ ಡೌನ್ ಉಲ್ಲಂಘಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕೊರೋನ ಭೀತಿಯ ಕಾರಣ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಹೇಳಲಾಗಿದ್ದರೂ ಶಿರಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನಿಯಮ ಪಾಲಿಸಿಲ್ಲ. ದೇವಸ್ಥಾನದಲ್ಲಿ ಪೂಜೆಗೆ ಅರ್ಚಕರಿಗೆ ಮಾತ್ರ ಅವಕಾಶ ನೀಡಿದ್ದರೂ ದೇವಸ್ಥಾನದ ಸಿಇಒ ಮತ್ತವರ ಕುಟುಂಬ ಸದಸ್ಯರು ರಾಮನವಮಿ ಆಚರಿಸಿದ್ದಾರೆ ಎಂದು timesnownews.com ವರದಿ ಮಾಡಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News