ಆಂಧ್ರಪ್ರದೇಶ ವ್ಯಾಟ್ ಕಾಯ್ದೆ ತೆರಿಗೆ ವ್ಯಾಪ್ತಿಗೆ ಆಕ್ಸಿಜನ್ ಐಪಿ, ನೈಟ್ರಸ್ ಆಕ್ಸೈಡ್ : ಸುಪ್ರೀಂ ಸೂಚನೆ

Update: 2020-04-13 16:42 GMT

ಹೊಸದಿಲ್ಲಿ, ಎ.13: ಮೆಡಿಕಲ್ ಆಕ್ಸಿಜನ್ ಐಪಿ ಮತ್ತು ನೈಟ್ರಸ್ ಆಕ್ಸೈಡ್ ಐಪಿಗಳು 2005ರ ಆಂಧ್ರಪ್ರದೇಶ ವ್ಯಾಟ್ ಕಾಯ್ದೆಯಡಿ ತೆರಿಗೆಗೆ ಅರ್ಹವಾಗಿದೆ ಮತ್ತು ಇವನ್ನು ಔಷಧೀಯ ಉದ್ದೇಶದ ವಸ್ತುಗಳ ದರ್ಜೆಗೆ ಭಡ್ತಿಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.

ಇವು ರೋಗ ನಿಶ್ಚಯ, ಚಿಕಿತ್ಸೆ, ರೋಗ ಬರದಂತೆ ಪ್ರತಿಬಂಧಕ ಕ್ರಮಗಳಲ್ಲಿ ಬಳಸುವ ಔಷಧಿಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಮೆಡಿಕಲ್ ಆಕ್ಸಿಜನ್ ಐಪಿ, ನೈಟ್ರಸ್ ಆಕ್ಸೈಡ್ ಐಪಿ 1940ರ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಅವರಿದ್ದ ನ್ಯಾಯಪೀಠ ತಿಳಿಸಿದೆ. ಹಾಗೂ 2005ರ ಆಂಧ್ರಪ್ರದೇಶ ವ್ಯಾಟ್ ಕಾಯ್ದೆಯ 88ನೇ ಉಲ್ಲೇಖದಡಿ ಇವು ಬರುತ್ತವೆ ಎಂಬ ಆಂಧ್ರಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ.

2005ರ ಆಂಧ್ರಪ್ರದೇಶ ವ್ಯಾಟ್ ಕಾಯ್ದೆಯ 4ನೇ ಅನುಸೂಚಿಯ 88ನೇ ಉಲ್ಲೇಖದ ವ್ಯಾಪ್ತಿಗೆ ಆಕ್ಸಿಜನ್ ಐಪಿ, ನೈಟ್ರಸ್ ಆಕ್ಸೈಡ್ ಐಪಿಯನ್ನು ಸೇರಿಸಿರುವುದನ್ನು ಪ್ರಶ್ನಿಸಿ ಮತ್ತು ಇದನ್ನು 5ನೇ ಅನುಸೂಚಿಯ ‘ವರ್ಗೀಕರಿಸದ ಸರಕುಗಳು’ ವಿಭಾಗಕ್ಕೆ ಸೇರಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಎರಡು ವರ್ಗಕ್ಕೆ ಸೇರಿದ ಸರಕುಗಳಿಗೆ ವಿಧಿಸಲಾಗುವ ತೆರಿಗೆಯ ಪ್ರಮಾಣವೂ ಭಿನ್ನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News