ಕೆಮ್ಮಿದ್ದಕ್ಕಾಗಿ ಹಲ್ಲೆ ನಡೆಸಿದ ಗುಂಪು: ವ್ಯಕ್ತಿ ಮೃತ್ಯು

Update: 2020-04-24 08:24 GMT

ಮುಂಬೈ, ಎ.24: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ  ಕೆಮ್ಮಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬರು ಸ್ಥಳೀಯರಿಂದ ಹಲ್ಲೆಗೊಳಗಾಗಿ ಗಟಾರಕ್ಕೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

34 ವರ್ಷದ ಗಣೇಶ್ ಗುಪ್ತಾ ಎಂಬವರ ಮೇಲೆ   ಕೋವಿಡ್ -19 ರೋಗಿ ಎಂಬ ಅನುಮಾನದ ಮೇಲೆ ಹಲ್ಲೆ ನಡೆದಿದ್ದು, ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಗಣೇಶ್ ಗುಪ್ತಾಗಟಾರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಗಣೇಶ್ ಗುಪ್ತಾ   ಕೋವಿಡ್ -19 ಲಾಕ್‌ಡೌನ್ ಮಧ್ಯೆ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಬಂದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು  ಮಾಹಿತಿ ನೀಡಿದ್ದಾರೆ.

ಪೇಟೆಯಲ್ಲಿ ಕೆಲವು ಪೊಲೀಸರು ಗಸ್ತಿನಲ್ಲಿರುವುದನ್ನು ಗಮನಿಸಿದ  ಗಣೇಶ್ ಗುಪ್ತಾ  ಪೊಲೀಸರ ಕಣ್ಣು ತಪ್ಪಿಸಿ  ಪರ್ಯಾಯ ಮಾರ್ಗದಲ್ಲಿ  ತೆರಳಿದ್ದರು. ಆ ದಾರಿಯಲ್ಲಿ  ತೆರಳುತ್ತಿದ್ದಾಗ ಆಕಸ್ಮಿಕವಾಗಿ ಅವರಿಗೆ ಕೆಮ್ಮು ಬಂತು. ಆಗ  ದಾರಿಯಲ್ಲಿ ಸಂಚರಿಸುತ್ತಿದ್ದ ಕೆಲವು ಮಂದಿಗಣೇಶ್ ಗುಪ್ತಾ  ಕೋವಿಡ್ ರೋಗಿ ಎಂಬ ಗುಮಾನಿ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ.   ಹಲ್ಲೆಗೊಳಗಾದ ಗಣೇಶ್ ಗುಪ್ತಾ  ರಸ್ತೆ ಪಕ್ಕದ ಗಟಾರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News