ಜೈನ ಸನ್ಯಾಸಿಯ ಆಗಮನದ ಸಂಭ್ರಮ: ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿ ಭಾರೀ ಸಂಖ್ಯೆಯಲ್ಲಿ ಸೇರಿದ ಜನ

Update: 2020-05-13 10:30 GMT
ಚಿತ್ರಕೃಪೆ: ಎಎನ್‌ಐ

ಬಾಂಡ(ಮಧ್ಯಪ್ರದೇಶ), ಮೇ 13: ದೇಶದಲ್ಲಿಂದು ಒಂದೇ ದಿನ 3,525 ಕೊರೋನ ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಇಂದು ಬೆಳಗ್ಗೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಸುರಕ್ಷಿತ ಅಂತರ ನಿಯಮವನ್ನು ಉಲ್ಲಂಘಿಸಿದ ಜನತೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಜೈನ ಸನ್ಯಾಸಿಯ ಆಗಮನದ ಸಂಭ್ರಮವನ್ನು ಆಚರಿಸಿದ್ದಾರೆ.

ಮಧ್ಯಪ್ರದೇಶ ಕೊರೋನ ವೈರಸ್‌ನಿಂದ ತೀವ್ರವಾಗಿ ಬಾಧಿತವಾಗಿರುವ ರಾಜ್ಯಗಳ ಪೈಕಿ ಒಂದಾಗಿದೆ. ರಾಜ್ಯದಲ್ಲಿ 3,986 ಸೋಂಕು ಪ್ರಕರಣ ವರದಿಯಾಗಿದ್ದು, ವೈರಸ್‌ಗೆ 225 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಸುಮಾರು ಎರಡು ತಿಂಗಳುಗಳಿಂದ ಲಾಕ್‌ಡೌನ್ ಘೋಷಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ಗಜ ದೂರದಲ್ಲಿ ನಿಂತುಕೊಳ್ಳಿ ಎಂದು ಜನತೆಯನ್ನು ಪದೇ ಪದೇ ವಿನಂತಿಸುತ್ತಿದ್ದಾರೆ. ಆದರೆ, ಬಂಡಾ ನಗರದಲ್ಲಿನ ಜನತೆಯು ಸುರಕ್ಷಿತ ಅಂತರವನ್ನು ಮರೆತು ಗುಂಪುಗುಂಪಾಗಿ ಒಂದೇ ಕಡೆ ಸೇರಿದ್ದಾರೆ. ಸಾವಿರಾರು ಪುರುಷ ಹಾಗೂ ಮಹಿಳೆಯರು ಜೈನ ಸನ್ಯಾಸಿ ಪ್ರಮನ್‌ಸಾಗರ್ ಅವರ ಸುತ್ತಲೂ ಸುತ್ತುತ್ತಿರುವ ದೃಶ್ಯ ಕಂಡುಬಂದಿತ್ತು.

"ಸಂಘಟಕರ ವಿರುದ್ಧ ಕ್ರಮಕೈಗೊಂಡು ತನಿಖೆ ನಡೆಸಲು ನಿರ್ದೇಶಿಸಲಾಗಿದೆ. ಸುರಕ್ಷಿತ ಅಂತರ ಹಾಗೂ ದೊಡ್ಡ ಗುಂಪು ನಿಷೇಧಿಸುವ ಆದೇಶ(ಸೆಕ್ಷನ್ 144ರ ಅಡಿ)ವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ'' ಎಂದು ಸಾಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರವೀಣ್ ಭುರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News