ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್‌ಗೆ ಕೋವಿಡ್-19
ಮುಂಬೈ,ಮೇ 25: ಮಹಾರಾಷ್ಟ್ರದ ಸಂಪುಟ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್‌ಗೆ ಕೋವಿಡ್-19 ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಕಾಂಗ್ರೆಸ್ ನಾಯಕ ಚವಾಣ್ ಪ್ರಸ್ತುತ ಲೋಕೋಪಯೋಗಿ ಇಲಾಖೆ(ಪಿಡಬ್ಲುಡಿ)ಸಚಿವರಾಗಿದ್ದಾರೆ.
ಉದ್ದವ್ ಠಾಕ್ರೆ ಸರಕಾರದಲ್ಲಿ ಕೊರೋನ ಸೋಂಕಿಗೆ ಒಳಗಾಗಿರುವ ಎರಡನೇ ಸಚಿವ ಅಶೋಕ್ ಚವಾಣ್. ಇತ್ತೀಚೆಗೆ ವಸತಿ ಸಚಿವ ಜೀತೇಂದ್ರ ಅವದ್‌ಗೆ ಸೋಂಕು ತಗಲಿತ್ತು.
ಸಚಿವ ಚವಾಣ್ ಪದೇ ಪದೇ ಮುಂಬೈ ಹಾಗೂ ತಮ್ಮ ತವರು ಜಿಲ್ಲೆ ಮರಾಠವಾಡಕ್ಕೆ ಪ್ರಯಾಣಿಸುತ್ತಿದ್ದರು.ಚವಾಣ್ ಪ್ರಸ್ತುತ ನಾಂದೇಡ್‌ನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಚವಾಣ್ ಕಳೆದ ಕೆಲವು ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದರು.
ಎನ್‌ಸಿಪಿ ನಾಯಕ ಜೀತೇಂದ್ರ ಅವದ್ ಕೊರೋನ ಸೋಂಕಿನಿಂದ ಇದೀಗ ಚೇತರಿಸಿಕೊಂಡಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಎರಡು ವಾರ ಚಿಕಿತ್ಸೆ ಪಡೆದಿದ್ದರು. ತನ್ನ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿತ್ತು ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು.