ಮಿಡತೆ ದಾಳಿ ತಡೆಗೆ ಪಾಕಿಸ್ತಾನದ ಮಾದರಿ ಅನುಸರಿಸಬೇಕು: ಆರೆಸ್ಸೆಸ್ ಅಂಗಸಂಸ್ಥೆಯ ನಾಯಕ

Update: 2020-05-28 18:14 GMT

ಹೊಸದಿಲ್ಲಿ, ಮೇ 28: ಮಿಡತೆಗಳನ್ನು ಕೋಳಿ ಆಹಾರವನ್ನಾಗಿ ಪರಿವರ್ತಿಸುವ ಪಾಕಿಸ್ತಾನದ ಮಾದರಿಯನ್ನು ಭಾರತವೂ ಅನುಸರಿಸಬೇಕು ಎಂದು ಸಂಘ ಪರಿವಾರಕ್ಕೆ ಸೇರಿದ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ)ನ ರಾಷ್ಟ್ರೀಯ ಸಹಸಂಚಾಲಕ ಅಶ್ವನಿ ಮಹಾಜನ್ ಅವರು ಸಲಹೆಯನ್ನು ನೀಡಿದ್ದಾರೆ.

‘ಪಾಕಿಸ್ತಾನವು ಮಿಡತೆಗಳ ದಾಳಿಯನ್ನು ಅವುಗಳನ್ನು ಕೋಳಿ ಆಹಾರವನ್ನಾಗಿ ಪರಿವರ್ತಿಸಲು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಲೇಖನವೊಂದರಲ್ಲಿ ಓದಿದ್ದೇನೆ. ಒಳ್ಳೆಯ ಪರಿಕಲ್ಪನೆ ಎಲ್ಲಿಂದಲೇ ಬರಲಿ, ಅದರ ಅನ್ವೇಷಣೆಗೆ ನಾವು ಮುಕ್ತ ಮನಸ್ಸು ಹೊಂದಿರಬೇಕು. ಒಳ್ಳೆಯ ಪರಿಕಲ್ಪನೆಗಳನ್ನು ನಾವು ಅಳವಡಿಸಿಕೊಳ್ಳಬೇಕು, ಅದರಲ್ಲೇನೂ ಹಾನಿಯಿಲ್ಲ’ ಎಂದು Theprint.in ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಹಾಜನ್ ಹೇಳಿದರು.

ಮಿಡತೆಗಳು ರಾತ್ರಿ ಹಾರಾಡುವುದಿಲ್ಲ,ಹೀಗಾಗಿ ಆ ವೇಳೆ ಅವುಗಳನ್ನು ಹಿಡಿದು ಪ್ರೋಟಿನ್ ಆಗಿ ಪರಿವರ್ತಿಸಬಹುದು ಎಂದು ಲೇಖನದಲ್ಲಿ ಹೇಳಿರುವುದನ್ನ್ನೂ ಅವರು ಉಲ್ಲೇಖಿಸಿದರು.

 ಲೇಖನವನ್ನು ಟ್ವಿಟರ್‌ನಲ್ಲಿಯೂ ಶೇರ್ ಮಾಡಿರುವ ಮಹಾಜನ್,ಪಾಕಿಸ್ತಾನವು ಮಿಡತೆಗಳ ಬೆದರಿಕೆಯನ್ನು ಕೋಳಿ ಆಹಾರವಾಗಿ ಪರಿವರ್ತಿಸುತ್ತಿದೆ. ಇದರ ಬಗ್ಗೆ ತಿಳಿದುಕೊಂಡು, ಈ ಮಾದರಿಯನ್ನು ಅನುಸರಿಸುವ ಅಗತ್ಯವಿದೆ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News