ಮುಂಬೈ ಶಾಪಿಂಗ್ ಸೆಂಟರ್‌ನಲ್ಲಿ ಅಗ್ನಿ ಆಕಸ್ಮಿಕ

Update: 2020-07-11 06:21 GMT

ಮುಂಬೈ, ಜು.11: ಶನಿವಾರ ಬೆಳಗ್ಗಿನ ಜಾವ ಮುಂಬೈನ ಉಪ ನಗರ ಬೊರಿವಲಿಯಲ್ಲಿರುವ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಕನಿಷ್ಠ 14 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಈ ತನಕ ಯಾವುದೇ ಸಾವು-ನೋವಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 "ಕಟ್ಟಡದ ತಳ ಮಾಳಿಗೆಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿದೆ. ನಾವು ಬೆಂಕಿಯನ್ನು ನಂದಿಸಲು ರೊಬೋಟ್‌ನ್ನು ನಿಯೋಜಿಸಿದ್ದೇವೆ. ನಾಲ್ಕು ಫೈಯರ್ ಇಂಜಿನ್‌ಗಳು ಹಾಗೂ 13 ಜಂಬೊ ಟ್ಯಾಂಕರ್‌ಗಳನ್ನು ಬೆಂಕಿ ನಂದಿಸಲು ಬಳಸಲಾಗುತ್ತಿದೆ'' ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಂಗ್‌ದಾಲೆ ಹೇಳಿದ್ದಾರೆ.

ಶಾಪಿಂಗ್ ಕಾಂಪ್ಲೆಕ್ಸ್‌ನ ಒಂದು ಅಂಗಡಿಯಲ್ಲಿ ಸಂಭವಿಸಿರುವ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಕಾಂಪ್ಲೆಕ್ಸ್‌ನ ಭದ್ರತೆಯ ಮೇಲ್ವಿಚಾರಣೆ ಹೊಣೆಹೊತ್ತಿರುವವರು ಶಂಕಿಸಿದ್ದಾರೆ.

"ಬೆಂಕಿಯು ಬೆಳಗ್ಗೆ 2:55ರ ಸುಮಾರಿಗೆ ಕಾಣಿಸಿಕೊಂಡಿದೆ. ಭದ್ರತಾ ಸಿಬ್ಬಂದಿ ನಮಗೆ ಮಾಹಿತಿ ನೀಡಿದ ತಕ್ಷಣ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದೇವೆ. ಕಾಂಪ್ಲೆಕ್ಸ್‌ನೊಳಗೆ 77 ಅಂಗಡಿಗಳೀವೆ. ಎಲ್ಲವೂ ಮೊಬೈಲ್ ಫೋನ್‌ಗಳನ್ನು ಹೊಂದಿರುವ ಅಂಗಡಿಗಳಾಗಿವೆ. ಬೆಂಕಿಗೆ ಶಾರ್ಟ್ ‌ಸರ್ಕ್ಯೂಟ್ ಕಾರಣ ಎಂದು ಶಾಪಿಂಗ್ ಸೆಂಟರ್‌ನ ಭದ್ರತಾ ಮೇಲ್ವಿಚಾರಕ ವಿಜಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News