ಬಾಟಾ ಕಂಪನಿ ಭಾರತದ್ದು ಎಂದುಕೊಂಡವರು ಎಷ್ಟು ಮಂದಿ ?

Update: 2020-10-21 06:29 GMT

ನಮ್ಮ ಕೆಲ ಅಚ್ಚುಮೆಚ್ಚಿನ ಬ್ರಾಂಡ್‍ಗಳ ಮೂಲ ಸ್ವದೇಶಿಯೇ ಅಥವಾ ವಿದೇಶಿಯೇ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಇಲ್ಲಿ ನೀಡಲಾಗಿರುವ 17 ಬ್ರಾಂಡ್ ಗಳ ಹೆಸರು ಹಾಗೂ ಅವುಗಳ ಮೂಲ ದೇಶ ಯಾವುದು ಎಂದು ತಿಳಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತ.

ಟೈಡ್: ಈ ಕಂಪೆನಿಯ ಜಾಹೀರಾತುಗಳಲ್ಲಿರುವ ದೇಸಿ ಸ್ಪರ್ಶ ನೋಡಿದರೆ ಸ್ವದೇಶಿ ಬ್ರಾಂಡ್ ಎಂದೇ ಅಂದುಕೊಳ್ಳಬೇಕು. ಆದರೆ ಮೂಲತಃ ಟೈಡ್ ಅಮೆರಿಕಾದ ಖ್ಯಾತ ಎಫ್‍ಎಂಸಿಜಿ ಬ್ರಾಂಡ್ ಪ್ರಾಕ್ಟರ್ ಎಂಡ್ ಗ್ಯಾಂಬಲ್ ಸಂಸ್ಥೆಯ ಉತ್ಪನ್ನವಾಗಿದೆ.

ಪೆಪೆ ಜೀನ್ಸ್: ನಮ್ಮ ಯುವಜನತೆಯ ಅಚ್ಚುಮೆಚ್ಚಿನ ಈ ಡೆನಿಮ್ ಬ್ರಾಂಡ್ ಮೂಲ ಲಂಡನ್‍ನದ್ದಾಗಿದ್ದರೂ ಅದರ ಸ್ಥಾಪಕರು ಮೂವರು ಭಾರತೀಯ ಸೋದರರಾದ ನಿತಿನ್, ಅರುಣ್ ಮತ್ತು ಮಿಲಿನ್ ಶಾ.

ಬಾಟಾ: ಕೆನಡಾ ಮೂಲದ ಈ ಪಾದರಕ್ಷೆಗಳ ಹೆಸರುವಾಸಿ ಸಂಸ್ಥೆಯ ಮುಖ್ಯ ಕಾರ್ಯಾಲಯ ಸ್ವಿಝರ್ ಲ್ಯಾಂಡ್ ದೇಶದ ಲಾಸಾನ್ ನಗರದಲ್ಲಿದೆ.

ಕೋಲ್ಗೇಟ್: ಭಾರತದಲ್ಲಿ ಹೆಚ್ಚಿನವರು ಉಪಯೋಗಿಸುವ ಕೋಲ್ಗೇಟ್ ಟೂತ್ ಪೇಸ್ಟ್ ಬ್ರಾಂಡ್ 1896ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜನ್ಮ ತಾಳಿತ್ತು. 

ರಾಯಲ್ ಎನ್‍ಫೀಲ್ಡ್: ಭಾರತದ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬರುವ ಈ ಬ್ರಾಂಡ್‍ನ ಮೋಟಾರ್ ಬೈಕ್‍ಗಳನ್ನು 1901ರಲ್ಲಿ ವರ್ಸೆಸ್ಟರ್‍ಶೈರ್ ನಲ್ಲಿ  ಮೊದಲು ತಯಾರಿಸಲಾಗಿತ್ತು.

ಬೋಸ್: ಜಗತ್ತಿನ ಅತ್ಯುನ್ನತ ಆಡಿಯೋ ಉಪಕರಣಗಳ ಈ ಬ್ರಾಂಡ್ ಅನ್ನು ಭಾರತೀಯ ಮೂಲದ ಅಮರ್ ಬೋಸ್ ಎಂಬವರು ಅಮೆರಿಕಾದ ಮೆಸ್ಸಾಚುಸೆಟ್ಸ್ ನಗರದ ಫ್ರೇಮಿಂಗ್‍ಹ್ಯಾಮ್ ಇಲ್ಲಿ ಆರಂಭಿಸಿದ್ದರು.

ಗುಡಂಗ್ ಗರಂ: ಈ ಕ್ಲೋವ್ ಸಿಗರೇಟ್ ಬ್ರಾಂಡ್ ಇಂಡೊನೇಷ್ಯಾದಲ್ಲಿ 1958ರಲ್ಲಿ ಆರಂಭಗೊಂಡಿತ್ತು.

ಟೈಟನ್: ಈ ಜನಪ್ರಿಯ ಬ್ರಾಂಡ್ ಟಾಟಾ ಗ್ರೂಪ್ ಹಾಗೂ ತಮಿಳುನಾಡು ಇಂಡಸ್ಟ್ರಿಯಲ್ ಡೆವಲೆಪ್ಮೆಂಟ್ ಕಾರ್ಪೊರೇಶನ್ ಇವುಗಳ ಜಂಟಿ ಒಡೆತನದ ಸಂಸ್ಥೆಯಾಗಿದೆ.

ಹೈಡಿಸೈನ್: ಈ ಚರ್ಮದ ಉತ್ಪನ್ನಗಳ ಅಂತಾರಾಷ್ಟ್ರೀಯ ಬ್ರಾಂಡ್‍ನ ಮುಖ್ಯ ಕಾರ್ಯಾಲಯ ತಮಿಳುನಾಡಿನ ಪಾಂಡಿಚೆರಿಯಲ್ಲಿದೆ.

ಬಿಸ್ಲೆರಿ: ಭಾರತದ ಪಾರ್ಲೆ ಗ್ರೂಪ್ ಒಡೆತನದ ಈ ಬಿಸ್ಲೆರಿ ಉತ್ಪನ್ನ ಮಿನರಲ್ ವಾಟರ್ ಗೆ ಒಂದು ಪರ್ಯಾಯ ಪದವಾಗಿ ಬಿಟ್ಟಿದೆ.

ಅಲ್ಲೆನ್ ಸೊಲ್ಲಿ: ಭಾರತದ ಅತ್ಯಂತ ದೊಡ್ಡ ರಿಟೇಲ್ ಬಟ್ಟೆಗಳ ಬ್ರಾಂಡ್ ಆಗಿರುವ ಇದರ ಒಡೆತನ ದಿ ಆದಿತ್ಯ ಬಿರ್ಲಾ ಗ್ರೂಪ್ ಗೆ ಸೇರಿದೆ.

ಮೊಂಟೆ ಕಾರ್ಲೊ: ಉಣ್ಣೆಯ ಬಟ್ಟೆಗಳಿಗೆ ಹೆಸರುವಾಸಿಯಾದ ಈ ಬ್ರಾಂಡ್ ಮೂಲ ಪಂಜಾಬ್‍ನ ಲುಧಿಯಾನದಲ್ಲಿದೆ.

ಪಾರ್ಕ್ ಅವೆನ್ಯೂ: ಈ ಹೆಸರುವಾಸಿ ಬ್ರಾಂಡ್ ದಿ ರೇಮಂಡ್ ಗ್ರೂಪ್‍ಗೆ ಸೇರಿದ್ದಾಗಿದೆ.

ಮ್ಯಾಗಿ: ಮಕ್ಕಳ ಅಚ್ಚುಮೆಚ್ಚಿನ ಮ್ಯಾಗಿ ಉತ್ಪನ್ನಗಳು ಸ್ವಿಝರ್ ಲ್ಯಾಂಡ್ ಮೂಲದ ನೆಸ್ಲೆ ಕಂಪೆನಿಗೆ ಸೇರಿದ್ದಾಗಿದೆ.

ಪೀಟರ್ ಇಂಗ್ಲೆಂಡ್: ಈ ಬಟ್ಟೆಗಳ ಬ್ರಾಂಡ್‍ನಲ್ಲಿ ಇಂಗ್ಲೆಂಡ್ ಪದ ಇದ್ದರೂ ಇದೊಂದು ಭಾರತೀಯ ಬ್ರಾಂಡ್ ಆಗಿದ್ದು ಆದಿತ್ಯ ಬಿರ್ಲಾ ಗ್ರೂಪ್ ಒಡೆತನದಲ್ಲಿದೆ.

ಲೂಯಿಸ್ ಫಿಲಿಪ್: ಪಾಶ್ಚಾತ್ಯ ಹೆಸರಿದ್ದರೂ ಇದು ಭಾರತದ ಆದಿತ್ಯ ಬಿರ್ಲಾ ಗ್ರೂಪ್ ಉತ್ಪನ್ನದ ಬಟ್ಟೆಗಳ ಬ್ರಾಂಡ್ ಆಗಿದೆ.

ಲೈಫ್ ಬಾಯ್: ಭಾರತೀಯರ ಪಾಲಿನ ಅಚ್ಚುಮೆಚ್ಚಿನ ಈ ಬ್ರಾಂಡ್ ಅನ್ನು ಇಂಗ್ಲೆಂಡ್‍ನಲ್ಲಿ 1895ರಲ್ಲಿ ಲಿವರ್ ಬ್ರದರ್ಸ್ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News