ಟೆಕ್ಕಿಗಳಾಗಿದ್ದ ಅವಳಿ ಸೋದರರು ಕೆಲವೇ ಗಂಟೆಗಳ ಅಂತರದಲ್ಲಿ ಕೋವಿಡ್ ಸೋಂಕಿಗೆ ಬಲಿ

Update: 2021-05-18 06:14 GMT
Photo source: timesofindia

ಮೀರತ್: ಮೀರತ್ ನಗರದ ನಿವಾಸಿಗಳಾದ ಜೋಫ್ರೆಡ್ ವರ್ಗೀಸ್ ಗ್ರೆಗರಿ ಹಾಗೂ ರಾಲ್ಫ್ರೆಡ್ ಜಾರ್ಜ್ ಗ್ರೆಗರಿ ಅವಳಿ ಸಹೋದರರು. ಇಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರು. ಇಬ್ಬರೂ ಹೈದರಾಬಾದ್‍ನಲ್ಲಿ ಉದ್ಯೋಗದಲ್ಲಿದ್ದರು.

ಅಚ್ಚರಿಯೆಂದರೆ ಇಬ್ಬರೂ ತಮ್ಮ 24ನೇ ಹುಟ್ಟುಹಬ್ಬದ ಮರುದಿನವೇ, ಎಪ್ರಿಲ್ 24ರಂದು ಕೋವಿಡ್ ಸೋಂಕಿಗೊಳಗಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಈ ಅವಳಿ ಸೋದರರು ಕಳೆದ ವಾರ ಕೆಲವೇ ಗಂಟೆಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಒಬ್ಬ ಮೇ 13ರಂದು ಮೃತಪಟ್ಟರೆ ಇನ್ನೊಬ್ಬ ಮೇ 14ರಂದು ಮೃತಪಟ್ಟಿದ್ದಾರೆ ಎಂದು timesofindia ವರದಿ ಮಾಡಿದೆ.

ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಗ್ರೆಗರಿ ರೇಮಂಡ್ ರಾಫೇಲ್ ಹಾಗೂ ಸೋಜಾ ದಂಪತಿಗಳ ದುಃಖ ಹೇಳತೀರದು. 

"ಶಿಕ್ಷಕರಾಗಿದ್ದ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಅವರು ಬಯಸಿದ್ದರು. ಅವರು ಕೊರಿಯಾ ಮತ್ತು ಜರ್ಮನಿಗೆ ಕೆಲಸದ ನಿಮಿತ್ತ ತೆರಳುವ ಉದ್ದೇಶ ಹೊಂದಿದ್ದರು ಆದರೆ ವಿಧಿಯಾಟ ಬೇರೆಯೇ ಆಗಿತ್ತು,'' ಎಂದು ಗ್ರೆಗರಿ ನೋವಿನಿಂದ ಹೇಳುತ್ತಾರೆ. ದಂಪತಿಗೆ ಇನ್ನೊಬ್ಬ ಪುತ್ರನಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News