ಆರೋಗ್ಯ ರಕ್ಷಕರ ಮೇಲಿನ ಹಿಂಸಾಚಾರದ ವಿರುದ್ಧ ಪರಿಣಾಮಕಾರಿ ಕಾನೂನು ಬೇಕು: ಅಮಿತ್ ಶಾಗೆ ಐಎಂಎ ಪತ್ರ

Update: 2021-06-02 05:15 GMT

ಹೊಸದಿಲ್ಲಿ:  ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಆರೋಗ್ಯ ರಕ್ಷಕರ ಮೇಲಿನ  ಹಿಂಸಾಚಾರದ ವಿರುದ್ಧ ಸಮಗ್ರ, ಏಕರೂಪದ ಹಾಗೂ  ಪರಿಣಾಮಕಾರಿ ಕಾನೂನನ್ನು ಅನುಮೋದಿಸುವಂತೆ ಕೋರಿದ್ದಾರೆ.

ಕೋವಿಡ್ ರೋಗಿಯ ಸಾವಿನ ನಂತರ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ನಿನ್ನೆ ಜನರ ಗುಂಪೊಂದು ವೈದ್ಯರ ಮೇಲೆ ಹಲ್ಲೆ ನಡೆಸಿದ ನಂತರ ಐಎಂಎ ಈ ಪತ್ರ ಬರೆದಿದೆ.

"ಆರೋಗ್ಯ ರಕ್ಷಕರ ಮೇಲಿನ ಹಿಂಸಾಚಾರದ ವಿರುದ್ಧ ಭಾರತಕ್ಕೆ ಸಮಗ್ರ, ಏಕರೂಪದ ಹಾಗೂ  ಪರಿಣಾಮಕಾರಿ ಕಾನೂನು ಬೇಕು. ಆರೋಗ್ಯ ರಕ್ಷಕರ ಮೇಲಿನ  ಹಿಂಸಾಚಾರದ ವಿರುದ್ಧ ಪರಿಣಾಮಕಾರಿ ಹಾಗೂ  ಬಲವಾದ ಕ್ರಮವನ್ನು ಅನುಮೋದಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ಸಮಸ್ಯೆಯ ನೈಜ ಗಾತ್ರವು ಹೆಚ್ಚಾಗಿ ತಿಳಿದಿಲ್ಲ ಹಾಗೂ  ಇತ್ತೀಚಿನ ಮಾಹಿತಿಯು ಕಡಿಮೆ ಇದೆ ಎಂದು ತೋರಿಸುತ್ತದೆ ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಐಎಂಎ ತಿಳಿಸಿದೆ.

"ಆರೋಗ್ಯ ರಕ್ಷಕರ ಮೇಲಿನ ಹಿಂಸಾಚಾರದ ಘಟನೆಗಳು ಕೆಲವು ವರ್ಷಗಳಿಂದ ಹೆಚ್ಚಾಗಿದೆ ಹಾಗೂ ವ್ಯಾಪಕವಾಗಿ ಹರಡಿವೆ. ಇಂತಹ ಭಯಾನಕ ಘಟನೆಯು  ವೈದ್ಯಕೀಯ ಅಭ್ಯಾಸಕ್ಕೆ ಅಪಾಯವನ್ನುಂಟುಮಾಡುತ್ತದೆ" ಎಂದು ಐಎಂಎ ಬರೆದಿದೆ.

"ಸಂಪೂರ್ಣ ವೈದ್ಯಕೀಯ  ಸಮುದಾಯವು ನಿಮ್ಮೊಂದಿಗೆ ನಿಂತಿದೆ ಹಾಗೂ  ಸಾಂಕ್ರಾಮಿಕ ಸಮಯದಲ್ಲಿ ದಣಿವರಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಆರೋಗ್ಯ ರಕ್ಷಕರ ಮೇಲಿನ  ಹಿಂಸಾಚಾರದಿಂದ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದೆ. ಆರೋಗ್ಯ ಹಿಂಸಾಚಾರದ ಅನೇಕ ಘಟನೆಗಳು ದೇಶಾದ್ಯಂತ  ನಡೆಯುತ್ತಿವೆ" ಎಂದು ಐಎಂಎ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News