ದೆಹಲಿ ಗಲಭೆ ಪ್ರಕರಣ: ಮಾಜಿ ಕೌನ್ಸಿಲರ್‌ ಇಶ್ರತ್‌ ಜಹಾನ್‌ಗೆ ಜಾಮೀನು ಮಂಜೂರು

Update: 2022-03-14 13:42 GMT
ಇಶ್ರತ್ ಜಹಾನ್‌ (Photo: twitter/ishratjj)

ಹೊಸದಿಲ್ಲಿ; 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದ ಕಾಂಗ್ರೆಸ್ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್‌ಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. 

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಈ ಪ್ರಕರಣದಲ್ಲಿ ಬಂಧನದಲ್ಲಿರುವ ಜಹಾನ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.

ಈಶಾನ್ಯ ದೆಹಲಿಯ ಖುರೇಜಿ ಖಾಸ್ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನಾ ಸ್ಥಳದಲ್ಲಿ ಜನಸಮೂಹವನ್ನು ಪ್ರಚೋದಿಸಿದ ಆರೋಪ ಕೂಡಾ ಇಶ್ರತ್‌ ಮೇಲಿದೆ. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಇಶ್ರತ್‌ ಜಹಾನ್‌ ಅವರ ವಕೀಲ ಪ್ರದೀಪ್ ತಿಯೋಟಿಯಾ, 'ನ್ಯಾಯಾಂಗ ಬಂಧನದಿಂದ (ಇಶ್ರತ್‌ ಜಹಾನ್) ಬಿಡುಗಡೆಗೊಳ್ಳುವುದನ್ನು ತಡೆಯುವ ಯಾವ ಪ್ರಕರಣಗಳೂ ಉಳಿದಿಲ್ಲ' ಎಂದು ತಿಳಿಸಿದ್ದಾರೆ.

ಪೊಲೀಸರು ಇಶ್ರತ್‌ರನ್ನು ತೀವ್ರವಾದಿ ಎಂದು ಬಿಂಬಿಸಿದ್ದಾರೆ, ಆದರೆ ವಾಸ್ತವವಾಗಿ ಅವರು ತಮ್ಮ ಜಾತ್ಯತೀತ ತತ್ವಗಳ ಆಧಾರದ ಮೇಲೆ ಇಶ್ರತ್‌  ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ವಿಚಾರಣೆ ವೇಳೆ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News