ಅಸನಿ ಚಂಡಮಾರುತ: ಆಂಧ್ರ ಕರಾವಳಿಗೆ ತೇಲುತ್ತಾ ಬಂದ ಚಿನ್ನದ ಬಣ್ಣದ ರಥ !
Update: 2022-05-11 16:45 GMT
ಅಮರಾವತಿ, ಮೇ 11: ‘ಅಸಾನಿ’ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ದವಾಗಿದ್ದು, ಆಂಧ್ರಪ್ರದೇಶದ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಮಂಗಳವಾರ ನಿಗೂಡ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ.
ರಥ ಇನ್ನೊಂದು ದೇಶದಿಂದ ತೇಲಿ ಬಂದಿರುವ ಸಾಧ್ಯತೆ ಇದೆ. ಬೇಹುಗಾರಿಕೆ ಸಂಸ್ಥೆ ಹಾಗೂ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದ ವೀಡಿಯೊದಲ್ಲಿ ಜನರು ರಥವನ್ನು ನೀರಿನಿಂದ ಎಳೆದು ದಡಕ್ಕೆ ತರುತ್ತಿರುವುದು ದಾಖಲಾಗಿದೆ.
ತೀವ್ರ ಚಂಡಮಾರುತ ‘ಅಸಾನಿ’ ಚಂಡಮಾರುತವಾಗಿ ದುರ್ಬಲಗೊಂಡಿದೆ. ಇದು ಗುರುವಾರ ಬೆಳಗ್ಗೆ ಇನ್ನಷ್ಟು ದುರ್ಬಲಗೊಳ್ಳಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಇಂದು ಬೆಳಗ್ಗೆ ಹೇಳಿದೆ.