​ಲಕ್ನೋ: ಮೂರಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಮೂವರು ಮೃತ್ಯು

Update: 2023-01-24 18:24 GMT
​ಲಕ್ನೋ: ಮೂರಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಮೂವರು ಮೃತ್ಯು
  • whatsapp icon

ಲಕ್ನೋ,ಜ.24: ಇಲ್ಲಿಯ ಹಝರತ್ಗಂಜ್ನಲ್ಲಿ ಮಂಗಳವಾರ ಮೂರಂತಸ್ತಿನ ವಸತಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು,ಇತರ ಕೆಲವರು ಅವಶೇಷಗಳಡಿ ಸಿಕ್ಕಿಕೊಂಡಿರುವ ಆತಂಕ ವ್ಯಕ್ತವಾಗಿದೆ. ಅವಘಡದಲ್ಲಿ ಹಲವರು ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು,ಈವರೆಗೆ ಮೂರು ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ ಪಾಠಕ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಬೆಳಗ್ಗೆ ಸಂಭವಿಸಿದ್ದ ಭೂಕಂಪನ ಕಟ್ಟಡ ಕುಸಿತಕ್ಕೆ ಕಾರಣವಾಗಿತ್ತೇ ಎಂಬ ಸುದ್ದಿಗಾರರ ಪ್ರಶ್ನೆಗೆ ಲಕ್ನೋ ಜಿಲ್ಲಾಧಿಕಾರಿ ಸೂರ್ಯಪಾಲ ಗಂಗ್ವಾರ್ ಅವರು,ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

Similar News