ಡಾ. ವಿ.ಕೆ ಮೊಹಮ್ಮದ್
Update: 2023-03-29 17:26 GMT
ವಿಟ್ಲ: ಮೂಲತಃ ವಿಟ್ಲದ ಕಂಬಳಬೆಟ್ಟು ನಿವಾಸಿ, ಪ್ರಸ್ತುತ ಉಪ್ಪಳ ಬಂದ್ಯೋಡು ನಿವಾಸಿ ಡಾ. ವಿ.ಕೆ ಮೊಹಮ್ಮದ್ (78) (ಕುಂಞಮೋನು ಡಾಕ್ಟರ್ ) ಅವರು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಕಂಬಳಬೆಟ್ಟು ಬದ್ರಿಯ ಕುಟುಂಬದ ಬದ್ರಿಯಾ ಅಂದುಂಞ ಹಾಜಿಯವರ ಹಿರಿಯ ಪುತ್ರರಾಗಿದ್ದಾರೆ. ಕಂಬಳಬೆಟ್ಟು ಬದ್ರಿಯಾ ಖಾದರ್, ಅಝೀಝ್, ಇಚ್ಚಾಲಿ, ಗಫೂರ್ ಮತ್ತು ಜನಪ್ರಿಯ ಸಂಸ್ಥೆಯ ಡಾ. ಬಶೀರ್ ಬದ್ರಿಯಾ ರವರ ಹಿರಿಯ ಸಹೋದರರಾಗಿದ್ದಾರೆ.
ಮೃತರಿಗೆ ನಾಲ್ವರು ಪುತ್ರರು, ಪತ್ನಿ ಇದ್ದಾರೆ.