ರೈಲ್ವೆ ಸುರಕ್ಷತಾ ಪಡೆ ಹೊಣೆ, ಸವಾಲು ಮತ್ತು ತಕರಾರು

ಆರ್ಪಿಎಫ್ ಕರ್ತವ್ಯಗಳು ದುಪ್ಪಟ್ಟಾಗುತ್ತಲೇ ಇವೆ. ಆದರೆ ಸಿಬ್ಬಂದಿ ಸಂಖ್ಯೆ ಕಡಿಮೆಯಿದೆ. ಕರ್ತವ್ಯದ ತೀವ್ರತೆಗೆ ಅನುಗುಣವಾಗಿ ಚಾಲಕರು ಮತ್ತು ಕಾವಲುಗಾರರಿಗೆ ಕಡ್ಡಾಯ ವಿಶ್ರಾಂತಿ ಅವಧಿ ಇರಬೇಕು, ಆದರೆ ಆರ್ಪಿಎಫ್ ಸಿಬ್ಬಂದಿಗೆ ಅದನ್ನು ಒದಗಿಸಲಾಗುತ್ತಿಲ್ಲ. ಈ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

Update: 2023-08-07 12:00 GMT
Editor : musaveer

- ಮುನೀಫ್ ಖಾನ್

ಜುಲೈ 31ರಂದು ರೈಲ್ವೇ ಸುರಕ್ಷತಾ ಪಡೆಯ (ಆರ್ಪಿಎಫ್) ಕಾನ್ಸ್ಟೆಬಲ್ ಚೇತನ್ ಸಿಂಗ್, ಮಹಾರಾಷ್ಟ್ರದ ವೈತರ್ಣ ರೈಲ್ವೆ ನಿಲ್ದಾಣದಲ್ಲಿ ಮುಂಬೈಗೆ ಹೊರಟಿದ್ದ ರೈಲಿನಲ್ಲಿ ತನ್ನ ಸರ್ವಿಸ್ ರೈಫಲ್ ಬಳಸಿ ತನ್ನ ಹಿರಿಯ ಅಧಿಕಾರಿಯನ್ನಲ್ಲದೆ ಇನ್ನೂ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ಘಟನೆ ಬೆಚ್ಚಿಬೀಳಿಸುವಂಥದು.

ಅದಾದ ಬಳಿಕ ಸಿಂಗ್ ಗಂಭೀರ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ವರದಿಗಳು ಬಂದವು. ಅಂಥ ಹೇಳಿಕೆ ನೀಡಿದ ರೈಲ್ವೆ, ಕೆಲವೇ ಗಂಟೆಗಳಲ್ಲಿ ಹಿಂದೆಗೆದುಕೊಂಡಿತು ಮತ್ತು ಅವರ ಕುಟುಂಬ ಇದನ್ನು ರಹಸ್ಯವಾಗಿಟ್ಟಿದೆ ಎಂದಿತು. ಈಚಿನ ನಿಯಮಿತ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಕಾಯಿಲೆ ಪತ್ತೆಯಾಗಿಲ್ಲ ಎಂದು ಕೂಡ ಸ್ಪಷ್ಟನೆ ನೀಡಿತು.

ರೈಲ್ವೆಯಲ್ಲಿ ನಿಜವಾಗಿಯೂ ಇಂಥದೊಂದು ಘಟನೆ ಅದೂ ಸುರಕ್ಷತಾ ಪಡೆ ಸಿಬ್ಬಂದಿಯಿಂದಲೇ ನಡೆದದ್ದು ಆಘಾತಕಾರಿ. ಆರ್ಪಿಎಫ್ ರೈಲ್ವೆ ಆಸ್ತಿ ರಕ್ಷಣೆ ಮತ್ತು ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ವಹಿಸುವ ಪಾತ್ರವೇನು ಎಂಬುದನ್ನು ಈ ಘಟನೆಯ ಹಿನ್ನೆಲೆಯಲ್ಲಿ ನೋಡುವ ಯತ್ನ ಇಲ್ಲಿನದು.

‘ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಆ್ಯಕ್ಟ್, 1957’ರ ಅಡಿಯಲ್ಲಿ ರೂಪುಗೊಂಡ ಆರ್ಪಿಎಫ್ ಪ್ರಯಾಣಿಕರು, ಪ್ರಯಾಣಿಕರ ಪ್ರದೇಶಗಳು ಮತ್ತು ರೈಲ್ವೆ ಆಸ್ತಿಯ ಸಮರ್ಪಕ ರಕ್ಷಣೆ ಮತ್ತು ಸುರಕ್ಷತೆಯನ್ನು ನಿರ್ವಹಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೂ ಇಂಥದೊಂದು ವ್ಯವಸ್ಥೆ ಇತ್ತು. ಆಗ ರೈಲ್ವೆಯಲ್ಲಿನ ವಾಚ್ ಮತ್ತು ವಾರ್ಡ್ ಕರ್ತವ್ಯಗಳಿಗಾಗಿ ಕಂಪೆನಿ ಪೊಲೀಸ್ ಎಂದಿದ್ದ ವ್ಯವಸ್ಥೆಯೇ ಈಗಿನ ಆರ್ಪಿಎಫ್ನ ಮೂಲ ಸ್ವರೂಪ.

ಆರ್ಪಿಎಫ್ನ ನೇತೃತ್ವವನ್ನು ಡೈರೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿ ವಹಿಸುತ್ತಾರೆ. ನಾಗರಿಕ ಸೇವಾ ಪರೀಕ್ಷೆಯ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರು ಭಾರತೀಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಸೇವೆಯ (ಐಆರ್ಪಿಎಫ್ಎಸ್) ಸದಸ್ಯರಾಗಿರುತ್ತಾರೆ.

ಆದರೂ ಕಾನ್ಸ್ಟೆಬಲ್ಗಳು, ಸಬ್-ಇನ್ಸ್ಪೆಕ್ಟರ್ಗಳು ಮತ್ತು ಸಹಾಯಕ ಸಬ್-ಇನ್ಸ್ಪೆಕ್ಟರ್ಗಳ ನೇಮಕಾತಿ ನಡೆಯುವುದು ರೈಲ್ವೇ ಸಚಿವಾಲಯ ನಡೆಸುವ ಪರೀಕ್ಷೆಗಳ ಮೂಲಕ. ಆರ್ಪಿಎಫ್ ಅಧಿಕಾರ ಮತ್ತು

ಜವಾಬ್ದಾರಿ:

ರೈಲ್ವೆ ಆಸ್ತಿ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ, 1966ರ ಅಡಿಯಲ್ಲಿ ಕಳ್ಳತನ, ರೈಲ್ವೆ ಆಸ್ತಿಯನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಪ್ರಾಮಾಣಿಕ ದುರುಪಯೋಗದ ಪ್ರಕರಣಗಳನ್ನು ಎದುರಿಸಲು ಆರ್ಪಿಎಫ್ಗೆ ಅಧಿಕಾರವಿದೆ. ಅಲ್ಲದೆ, ಮಹಿಳೆಯರಿಗೆ ಮೀಸಲಾದ ಬೋಗಿಗಳಿಗೆ ಅನಧಿಕೃತ ಪ್ರವೇಶ, ಅತಿಕ್ರಮಣ, ರೈಲುಗಳ ಮೇಲ್ಛಾವಣಿಯ ಮೇಲೆ ಪ್ರಯಾಣ, ವ್ಯಾಪಾರ ಮತ್ತು ಮಾರಾಟಕ್ಕೆ ಸಂಬಂಧಿಸಿದ - ರೈಲ್ವೆ ಕಾಯ್ದೆ, 1989ರ ಅಡಿಯಲ್ಲಿ ಅಪರಾಧಗಳ ವಿರುದ್ಧವೂ ಅದು ಕ್ರಮ ತೆಗೆದುಕೊಳ್ಳುತ್ತದೆ.

ಆರ್ಪಿಎಫ್ ದೇಶದ ವಿವಿಧ ಭಾಗಗಳಲ್ಲಿ 15 ಘಟಕಗಳನ್ನು ಹೊಂದಿದೆ. ಇವುಗಳಲ್ಲಿ ಮಹಿಳಾ ಬೆಟಾಲಿಯನ್ ಮತ್ತು ಕಮಾಂಡೋ ಫೋರ್ಸ್ - ಕಮಾಂಡೋ ಫಾರ್ ರೈಲ್ವೆ ಸೆಕ್ಯುರಿಟಿ (ಸಿಒಆರ್ಎಎಸ್) ಸೇರಿವೆ, ಇದನ್ನು ಆಗಸ್ಟ್ 2019ರಲ್ಲಿ ಸೇರಿಸಲಾಯಿತು. ರೈಲು ಕಾರ್ಯಾಚರಣೆಗಳಲ್ಲಿ ಅಡಚಣೆಯಾದಾಗ, ರೈಲ್ವೆ ಪ್ರದೇಶಗಳಲ್ಲಿನ ವಿಪತ್ತು, ಅಪಹರಣಗಳಂಥ ಸಂದರ್ಭಗಳಲ್ಲಿ ಸಿಒಆರ್ಎಎಸ್ ಕೆಲಸ ನಿರ್ವಹಿಸಬೇಕಿರುತ್ತದೆ,

ಕಮಾಂಡೋಗಳು - ಆರ್ಪಿಎಫ್ ಮತ್ತು ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಒಳಗೊಂಡಿದ್ದು ಪಡೆಯುವ ತರಬೇತಿ ನೆಲಬಾಂಬ್ ನಿರ್ವಹಣೆ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಿಷ್ಕ್ರಿಯಗೊಳಿಸುವುದು ಮೊದಲಾದವನ್ನು ಒಳಗೊಂಡಿರುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಿಶೇಷ ಸಮವಸ್ತ್ರಗಳು, ಬುಲೆಟ್ ಪ್ರೂಫ್ ಜಾಕೆಟ್ಗಳು ಮತ್ತು ಹೆಲ್ಮೆಟ್ ಸಹಿತ ಈ ಪಡೆ ಸನ್ನದ್ಧವಾಗಿರುತ್ತದೆ.

ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಮತ್ತು ಅಪರಾಧದ ಪತ್ತೆ, ನೋಂದಣಿ, ತನಿಖೆ ಮತ್ತು ತಡೆಗಟ್ಟುವಿಕೆ ಸರಕಾರಿ ರೈಲ್ವೆ ಪೋಲೀಸ್ (ಜಿಆರ್ಪಿ) ಜವಾಬ್ದಾರಿಯಾಗಿದೆ, ಇದು ಆಯಾ ರಾಜ್ಯ ಸರಕಾರದ ಅಡಿಯಲ್ಲಿ ಬರುತ್ತದೆ ಮತ್ತು ನಂತರ ಜಿಆರ್ಪಿಯ ಆಡಳಿತಾತ್ಮಕ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಜೊತೆಯಾಗಿ ಭರಿಸುತ್ತವೆ.

ಗೂಡ್ಸ್-ಶೆಡ್ಗಳು, ಸ್ಟೇಷನ್ಗಳು ಮತ್ತು ಪಾರ್ಸೆಲ್ ಕಛೇರಿಗಳಲ್ಲಿನ ಸರಕು ವ್ಯಾಗನ್ಗಳ ರಕ್ಷಣೆಗೆ ಜಿಆರ್ಪಿ ಹೊಣೆಯಲ್ಲ. ಅವು ಆರ್ಪಿಎಫ್ನ ಜವಾಬ್ದಾರಿಗಳಾಗಿವೆ.

ಆರ್ಪಿಎಫ್ ಸಾಮರ್ಥ್ಯ,

ಶಸ್ತ್ರಾಸ್ತ್ರ:

ಮಾರ್ಚ್ 11, 2020ರಂದು ರೈಲ್ವೇ ಸಚಿವಾಲಯ ಹೊರಡಿಸಿದ ಹೇಳಿಕೆ ಪ್ರಕಾರ, 61,869 ಆರ್ಪಿಎಫ್ ಸಿಬ್ಬಂದಿಯಿದೆ. ಅದರ ಒಟ್ಟು ಬಲ 74,830ರಷ್ಟಿದೆ.

ಎಲ್ಲಾ ಆರ್ಪಿಎಫ್ ಮತ್ತು ಆರ್ಇಎಸ್ಎಫ್ ಸಿಬ್ಬಂದಿಗೆ - ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಮೇಲಿನ ಶ್ರೇಣಿಯ ಅಧಿಕಾರಿಗಳು, ಹೆಡ್ ಕಾನ್ಸ್ಟೆಬಲ್ಗಳು, ಕಾನ್ಸ್ಟೆಬಲ್ಗಳು ಮತ್ತು ಚಾಲಕರು - ಅವರ ಶ್ರೇಣಿಯ ಆಧಾರದ ಮೇಲೆ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತದೆ. ಈ ಶಸ್ತ್ರಾಸ್ತ್ರಗಳಲ್ಲಿ ಪಿಸ್ತೂಲ್ಗಳು, ಕಾರ್ಬೈನ್ಗಳು, ಐಎನ್ಎಸ್ಎಎಸ್ ರೈಫಲ್ಗಳು, ಸ್ವಯಂ-ಲೋಡಿಂಗ್ ರೈಫಲ್ಗಳು (ಎಸ್ಎಲ್ಆರ್) ಮತ್ತು ಲಘು ಮೆಷಿನ್ ಗನ್ಗಳು (ಎಲ್ಎಮ್ಜಿ) ಸೇರಿವೆ.

2011ರಲ್ಲಿ ರೈಲ್ವೇ ಬೋರ್ಡ್ ಹೊರಡಿಸಿದ ಸ್ಥಾಯಿ ಆದೇಶದ ಪ್ರಕಾರ, ಸಹಾಯಕ ಸಬ್ ಇನ್ಸ್ಪ್ಪೆಕ್ಟರ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಎಲ್ಲಾ ಆರ್ಪಿಎಫ್ ಮತ್ತು ಆರ್ಪಿಎಸ್ಎಫ್ ಸಿಬ್ಬಂದಿಗೆ 9 ಮಿಮೀ. ಪಿಸ್ತೂಲ್ಗಳನ್ನು ಒದಗಿಸಲಾಗಿದೆ. ಆರ್ಪಿಎಫ್ ಹೆಡ್ ಕಾನ್ಸ್ಟ್ಟೇಬಲ್ಗಳಿಗೆ ಶೇ.15 ರಷ್ಟು ಎಕೆ-47 ರೈಫಲ್ಗಳನ್ನು ಒದಗಿಸಲಾಗಿದೆ, ಶೇ.20ರಷ್ಟು ಸಿಬ್ಬಂದಿಗೆ ಐಎನ್ಎಸ್ಎಎಸ್ ರೈಫಲ್ಗಳನ್ನು ಮತ್ತು ಶೇ.10ರಷ್ಟು ಸಿಬ್ಬಂದಿಗೆ ಎಸ್ಎಲ್ಆರ್ಗಳನ್ನು ಒದಗಿಸಲಾಗಿದೆ, ಉಳಿದವರಿಗೆ ಕಾರ್ಬೈನ್ಗಳು ಮತ್ತು ಪಿಸ್ತೂಲ್ಗಳನ್ನು ಒದಗಿಸಲಾಗಿದೆ.

ಆದೇಶದ ಪ್ರಕಾರ, ಆರ್ಪಿಎಫ್ನಲ್ಲಿ ಶೇ.10ರಷ್ಟು ಕಾನ್ಸ್ಟ್ಟೇಬಲ್ಗಳಿಗೆ ಮಾತ್ರ ಎಕೆ -47 ರೈಫಲ್ಗಳನ್ನು ಒದಗಿಸಬೇಕು, ಆದರೆ ಶೇ.25ರಷ್ಟು ಐಎನ್ಎಸ್ಎಎಸ್ ರೈಫಲ್ಗಳು, ಶೇ.15 ಎಸ್ಎಲ್ಆರ್ ಮತ್ತು ಉಳಿದವರಿಗೆ ಕಾರ್ಬೈನ್ ಮತ್ತು ಪಿಸ್ತೂಲ್ಗಳನ್ನು ಒದಗಿಸಲಾಗಿದೆ.

ಆರ್ಪಿಎಸ್ಎಫ್ ಹೆಡ್ ಕಾನ್ಸ್ಟ್ಟೇಬಲ್ಗಳಲ್ಲಿ ಶೇ.30ರಷ್ಟು ಎಕೆ-47 ರೈಫಲ್ಗಳನ್ನು ಒದಗಿಸಲಾಗಿದೆ, ಆದರೆ ಶೇ.40ರಷ್ಟು ಸಿಬ್ಬಂದಿ ಐಎನ್ಎಸ್ಎಎಸ್ ರೈಫಲ್ಗಳನ್ನು ಹೊಂದಿದ್ದಾರೆ. ಉಳಿದವರಿಗೆ ಪಿಸ್ತೂಲ್ ಮತ್ತು ಕಾರ್ಬೈನ್ಳನ್ನು ಒದಗಿಸಲಾಗಿದೆ.

ಆರ್ಪಿಎಸ್ಎಫ್ ಕಾನ್ಸ್ಟ್ಟೇಬಲ್ಗಳಲ್ಲಿ ಶೇ.20ರಷ್ಟು ಸಿಬ್ಬಂದಿಗೆ ಎಕೆ-47 ರೈಫಲ್ಗಳನ್ನು ಒದಗಿಸಲಾಗಿದೆ, ಶೇ.55ರಷ್ಟು ಸಿಬ್ಬಂದಿ ಐಎನ್ಎಸ್ಎಎಸ್ ರೈಫಲ್ಗಳನ್ನು ಹೊಂದಿದ್ದರೆ, ಉಳಿದವರಿಗೆ ಪಿಸ್ತೂಲ್ಗಳು ಮತ್ತು ಕಾರ್ಬೈನ್ಗಳನ್ನು ಒದಗಿಸಲಾಗಿದೆ.

ಇದಲ್ಲದೆ, ಅಧೀನ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ಶ್ರೇಣಿಯಲ್ಲಿ ಬರುವ ಎಲ್ಲಾ ಚಾಲಕರಿಗೆ (ತರಬೇತಿ ಪಡೆದವರು) 9 ಮಿ.ಮೀ. ಪಿಸ್ತೂಲ್ಗಳನ್ನು ನೀಡಲಾಗುತ್ತದೆ.

ವೈದ್ಯಕೀಯ ಪರೀಕ್ಷೆಗಳು:

ಭಾರತೀಯ ರೈಲ್ವೆಯ ಪ್ರಕಾರ, ಎ-1, ಎ-2 ಮತ್ತು ಎ-3 ವರ್ಗದ ಅಡಿಯಲ್ಲಿ ಗೆಜೆಟೆಡ್ ಅಧಿಕಾರಿಗಳು 45 ವರ್ಷ ವಯಸ್ಸಿನವರೆಗೆ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಮತ್ತು 55 ವರ್ಷ ವಯಸ್ಸಿನವರೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ನಿಯಮಿತ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ವರ್ಗ ಬಿ-1 ಮತ್ತು ಬಿ-2 ಅಡಿಯಲ್ಲಿ ಅಧಿಕಾರಿಗಳು 45 ವರ್ಷ ವಯಸ್ಸನ್ನು ತಲುಪಿದ ನಂತರ ಮತ್ತು ನಂತರ ಪ್ರತಿ 5 ವರ್ಷಗಳಿಗೊಮ್ಮೆ ಇಂತಹ ಪರೀಕ್ಷೆಗೆ ಒಳಗಾಗುತ್ತಾರೆ. ಸಿ-1 ಮತ್ತು ಸಿ-2 ವರ್ಗದ ಅಡಿಯಲ್ಲಿ ಅಧಿಕಾರಿಗಳಿಗೆ ಯಾವುದೇ ನಿಯತಕಾಲಿಕ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ.

ರೈಲ್ವೆ ವೆಬ್ಸೈಟ್ನಲ್ಲಿ ‘ಪಡೆಯ ಇತರರು’ ಎಂದು ಪಟ್ಟಿ ಮಾಡಲಾದ ಮತ್ತು ಗೆಜೆಟೆಡ್ ಅಲ್ಲದ ಸಿಬ್ಬಂದಿಯಾಗಿರುವ ಕಾನ್ಸ್ಟ್ಟೇಬಲ್ಗಳು ಪ್ರತೀ ಮೂರು ವರ್ಷಗಳಿಗೊಮ್ಮೆ ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಹಾಗಿದ್ದರೂ, ಈ ಪರೀಕ್ಷೆಗಳನ್ನು ಅವರಿಗೆ ಅಗತ್ಯವಿರುವ ಕಾಳಜಿ ಮತ್ತು ಗಮನದೊಂದಿಗೆ ನಡೆಸಲಾಗುವುದಿಲ್ಲ. ಮಾತ್ರವಲ್ಲ, ಮನೋವೈದ್ಯರ ಸಂಖ್ಯೆಯೂ ಕಡಿಮೆಯಾಗಿದೆ ಎಂಬ ದೂರುಗಳೂ ಇವೆ.

ವರ್ಷಗಳು ಕಳೆದಂತೆ, ಆರ್ಪಿಎಫ್ ಕರ್ತವ್ಯಗಳು ದುಪ್ಪಟ್ಟಾಗಿವೆ. ಆದರೆ ಸಿಬ್ಬಂದಿ ಸಾಮರ್ಥ್ಯ ಕಡಿಮೆಯಾಗಿದೆ. ಉದಾಹರಣೆಗೆ, ಕರ್ತವ್ಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಚಾಲಕರು ಮತ್ತು ಕಾವಲುಗಾರರಿಗೆ ಕಡ್ಡಾಯ ವಿಶ್ರಾಂತಿ ಅವಧಿ ಇದೆ, ಆದರೆ ಆರ್ಪಿಎಫ್ ಸಿಬ್ಬಂದಿಗೆ ಅದನ್ನು ಒದಗಿಸಲಾಗುತ್ತಿಲ್ಲ. ಈ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಕೃಪೆ: theprint.in

Tags:    

Writer - ವಾರ್ತಾಭಾರತಿ

contributor

Editor - musaveer

contributor

Similar News