ಅಮೆರಿಕಾ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರಿಂದ ಎನ್ಆರ್‌ಐ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಭೇಟಿ

Update: 2025-03-26 14:24 IST
ಅಮೆರಿಕಾ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರಿಂದ ಎನ್ಆರ್‌ಐ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಭೇಟಿ
  • whatsapp icon

ಬೆಂಗಳೂರು : ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್ಸ್, ಮಾರ್ಕ್ ಬರ್ನ್ಸ್ ಕಚೇರಿಯ (ಯುಎಸ್ಎ) ಮುಖ್ಯಸ್ಥೆ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು ಮಾರ್ಕ್ ಬರ್ನ್ಸ್ ಅವರ ಕಾರ್ಯದರ್ಶಿ ವೆರೋನಿಕಾ ಲಿನ್ ಓಶೀಲ್ಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಫೌಂಡೇಶನ್ ಫಾರ್ ಲೀಡರ್‌ಶಿಪ್ ಅಂಡ್ ಗವರ್ನೆನ್ಸ್‌ನ ಸಿಇಒ ಜಯಕರ್ ರಾವ್ ಮತ್ತು ಮಾಜಿ ಶಾಸಕಿ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿನಿಶಾ ನೀರೋ ಕೂಡ ಉಪಸ್ಥಿತರಿದ್ದರು.

ಆಧ್ಯಾತ್ಮಿಕ ಸಲಹೆಗಾರರೊಂದಿಗೆ ನಡೆದ ಈ ಭೇಟಿಯಲ್ಲಿ ಆಧ್ಯಾತ್ಮಿಕತೆ, ಭಾರತ ಮತ್ತು ಅಮೇರಿಕ ನಡುವಿನ ಸಂಬಂಧಗಳು, ಭಾರತೀಯ ವಲಸೆಗಾರರು ಮತ್ತು ಕರ್ನಾಟಕದ ಹೂಡಿಕೆ ಸಾಮರ್ಥ್ಯ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಇದೇ ವೇಳೆ ನಿಯೋಗವು ವ್ಯಾಪಾರ ಅವಕಾಶಗಳಿಗೆ ದಾರಿ ಮಾಡಿಕೊಡಲು ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿತು, ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಅವಕಾಶಗಳನ್ನು ಕಲ್ಪಿಸುವ ಭೇಟಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News