ಆಸ್ಟರ್ ಆಸ್ಪತ್ರೆಯಲ್ಲಿ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ ಕಾರ್ಯಾರಂಭ

Update: 2024-10-09 18:46 GMT

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ದಿನೇ ದಿನೇ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಆಸ್ಟರ್ ಆಸ್ಪತ್ರೆಯಲ್ಲಿ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಲ್ಲಿ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗೆ ಸಹಕಾರಿಯಾಗಲಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯದ ರೋಗಿಗಳು ಈ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ ಬಿ.ಎಲ್ ಸುಜಾತ ರಾಥೋಡ್ ಹೇಳಿದರು. ಅವರು ಆಸ್ಟರ್ ಆಸ್ಪತ್ರೆಯಿಂದ ಭಾರತದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿಯ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆಸ್ಟರ್ ಡಿಎಂ ಹೆಲ್ತ್ಕೇರ್‌ನ ಉಪ ನಿರ್ವಹಣಾ ನಿರ್ದೇಶಕಿ ಅಲಿಷಾ ಮುಪ್ಪನ್ ಮಾತನಾಡಿ, ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮುಂದಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಲಭ್ಯವಿರುವ ಈ ಕ್ರಾಂತಿಕಾರಿ ವಿಧಾನವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೂಕ್ಷ್ಮ ರೇಡಿಯೇಶನ್ ಅನ್ನು ನೀಡುವ ಮೂಲಕ ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಉದ್ದೇಶಿಸಲಾಗಿದೆ, ಈ ಚಿಕಿತ್ಸೆ ಶರೀರದಲ್ಲಿ ಹೆಚ್ಚು ಹಾನಿಯಾಗುವುದನ್ನು ಕಡಿಮೆ ಮಾಡಿ ರೋಗಿಯೂ ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ ಎಂದರು.

ಆಸ್ಟರ್ ಅಂತರಾಷ್ಟ್ರೀಯ ಆನ್‌ಕೋಲಾಜಿ ಸಂಸ್ಥೆಯ ಜಾಗತಿಕ ನಿರ್ದೇಶಕ ಡಾ. ಸೋಮಶೇಖರ್ ಎಸ್ ಪಿ, ಡಾ. ಎಮ್ ಎಸ್ ಬೆಲ್ಲಿಯಪ್ಪ, ಎಸ್‌ಐಟಿ ಸೊರ್ಡಿನಾ ಅಧ್ಯಕ್ಷ ಮತ್ತು ಸಿಇಒ ಫ್ರಾನ್ಸಿಸ್ಕೋ ಝಾನೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News