ಭಾರತದ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿನ ಪ್ರಗತಿ ಅನನ್ಯ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್

Update: 2024-10-09 18:50 GMT

ಬೆಂಗಳೂರು: ವಿದ್ಯಾರ್ಥಿಗಳು ಶಿಕ್ಷಣ ಮೇಳಗಳ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿನ ಪ್ರಗತಿಯು ಭಾರತದ ಗಡಿಯಾಚೆಗೆ ಹಬ್ಬಿದ್ದು, ಏರೋಸ್ಪೇಸ್‌ನ ಕೇಂದ್ರವಾಗಿರುವ ಬೆಂಗಳೂರು, ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಹೇಳಿದರು. ಅವರು ಚುಂಗ್‌ಚಿಯೊAಗ್‌ಬುಕ್ ಡೋ ವಿಶ್ವವಿದ್ಯಾಲಯವು ೨೦೨೪ರ ಚುಂಗ್‌ಬುಕ್ ಶಿಕ್ಷಣ ಮೇಳದಲ್ಲಿ ಮಾತನಾಡುತ್ತಿದ್ದರು.

ಇಂದು ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ಮೂಲಕ ಮತ್ತು ಜಾಗತಿಕ ಮಾನ್ಯತೆ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಪಾರ ಅವಕಾಶಗಳನ್ನು ಹೊಂದಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಮತ್ತು ಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶದಲ್ಲಿನ ಕಲಿಕೆಯು ಇನ್ನಷ್ಟು ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರದ ಡಿಪಿಎಆರ್ (ಇ-ಆಡಳಿತ) ಆಡಳಿತಾಧಿಕಾರಿ ಕವಿತಾ ಸಿ. ಗೌಡ (ಕೆಎಎಸ್) ಮಾತನಾಡಿ, ಇಂದಿನ ದಿನಗಳಲ್ಲಿ ಉದ್ಯೋಗ ಕೌಶಲ್ಯಗಳ ಅಗತ್ಯತೆ ಕುರಿತಾಗಿ ಮಾತನಾಡಿದರು. ಜೊತೆಗೆ ಕೊರಿಯಾದಲ್ಲಿನ ಉದ್ಯೋಗಾವಕಾಶಗಳ ಕುರಿತು ವಿವರಣೆಯನ್ನು ನೀಡಲಾಯಿತು. ಚುಂಗ್‌ಚಿಯೊAಬುಕ್‌ನ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ಗಳ ಕುರಿತಾಗಿ ಹಾಗೂ ಅಲ್ಲಿನ ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಬಗ್ಗೆ ನೆರೆದಂತಹ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಚುಂಗ್‌ಚಿಯೊAಗ್‌ಬುಕ್ ಡೋ ವಿಶ್ವವಿದ್ಯಾಲಯದ ಸಹಾಯಕ ಉಪ ನಿರ್ದೇಶಕÀ ಜಂಗ್ ಸೆಯುಂಗ್-ಹೊ, ವಿದೇಶಾಂಗ ವ್ಯವಹಾರಗಳ ಉಪಾಧ್ಯಕ್ಷ ಕ್ವೋನ್ ಬೋ-ಹನ್, ಲಿಮ್ ಜೆ ಮಿನ್, ಸಿಯೋ ಹ್ಯುನ್ ಸಿಯೋಕ್, ಕಿಂಗ್ ಸಿಯೋಂಗ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಜಸ್ಟಿನ್ ಯು, ಕಿಮ್ ಚಾಂಗ್ - ನ್ಯುನ್, ಚುಂಗ್‌ಚಿಯೊAಗ್‌ಬುಕ್-ಡೊ ನಿರ್ದೇಶಕ ಓಹ್ ಸೆ-ಹ್ವಾ, ಫಾರ್ ಈಸ್ಟ್ ವಿಶ್ವವಿದ್ಯಾಲಯದ ಚಾನ್ಸಲರ್ ಆದ ಲುಯ್ ಕೀ, ಬ್ರಾಡ್ ಫೋರ್ಡ್ ಗ್ಲೋಬಲ್ ಎಂಟರ್‌ಪ್ರೈಸಸರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸುರೇಶ್ ಕುಮಾರ್ ಜಿ.ಟಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News