ಈ ಹಿಂದಿಗಿಂತ ಈಗ ಭಾರತ ಹೆಚ್ಚು ಧ್ರುವೀಕರಣಗೊಂಡಿದೆ: ನಟಿ ವಿದ್ಯಾ ಬಾಲನ್‌

Update: 2024-04-25 09:22 GMT

ವಿದ್ಯಾ ಬಾಲನ್‌ (PTI)

ಮುಂಬೈ: “ಭಾರತವು ಹೆಚ್ಚು ಧ್ರುವೀಕರಣಗೊಂಡಿದೆ ಎಂದು ನನಗೆ ಅನಿಸುತ್ತದೆ. ಒಂದು ದೇಶವಾಗಿ ನಮಗೆ ಈ ಹಿಂದೆ ಧಾರ್ಮಿಕ ಅಸ್ಮಿತೆ ಇರಲಿಲ್ಲ, ಆದರೆ ಈಗ ನನಗೇಕೆ ತಿಳಿದಿಲ್ಲ… ರಾಜಕೀಯ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿಯೂ ನಾವು ಕಳೆದು ಹೋಗಿ ಅಸ್ಮಿತೆಗಾಗಿ ಹುಡುಕುತ್ತಿದ್ದೇವೆ,” ಎಂದು ನಟಿ ವಿದ್ಯಾ ಬಾಲನ್‌ ಹೇಳಿದ್ದಾರೆ

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಧ್ರುವೀಕರಣದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ಇದೆ ಎಂದಿದ್ದಾರೆ, ಅಷ್ಟೇ ಅಲ್ಲದೆ “ಇದರಿಂದ ನಾವು ಹಿಂದೆಂದಿಗಿಂತಲೂ ಒಂಟಿಯಾಗಿದ್ದೇವೆ ಎಂದರು. ಇವತ್ತು ಜಗತ್ತೇ ಧ್ರುವೀಕರಣಗೊಂಡಿದೆ, ಇದು ಒಂದು ದೇಶದ ವಿಚಾರವಲ್ಲ,” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಯಾರಾದರೂ ಧಾರ್ಮಿಕ ಕಟ್ಟಡ ನಿರ್ಮಿಸಲು ದೇಣಿಗೆ ಕೋರಿದರೆ ನಾನು ನೀಡುವುದಿಲ್ಲ, ಆಸ್ಪತ್ರೆ, ಶಾಲೆ ಅಥವಾ ಶೌಚಾಲಯ ನಿರ್ಮಾಣಕ್ಕೆ ನಾನು ಖುಷಿಯಿಂದ ದೇಣಿಗೆ ನೀಡುವೆ ಎಂದು ಹೇಳುತ್ತೇನೆ,” ಎಂದು ವಿದ್ಯಾ ಹೇಳಿದರು.

“ನನಗೆ ರಾಜಕೀಯದ ಬಗ್ಗೆ ತುಂಬಾ ಭಯವಿದೆ, ಅವರು ನಮ್ಮನ್ನು ನಿಷೇಧಿಸಬಹುದು ಅಥವಾ ಕಪ್ಪು ಪಟ್ಟಿಗೆ ಸೇರಿಸಬಹುದು,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News