ಹಾಜಿ ಅಬ್ದುಲ್ ಖಾದರ್ ಹಂಡೇಲು ನಿಧನ

Update: 2023-10-12 17:04 GMT

ಮಂಗಳೂರು: ಮೂಡುಬಿದಿರೆ ಸಮೀಪದ ಹಂಡೇಲು ನಿವಾಸಿ ಹಾಜಿ ಅಬ್ದುಲ್ ಖಾದರ್ ಯಾನೆ ಕುಂಞಾಕ (85) ಗುರುವಾರ ರಾತ್ರಿ ತನ್ನ ಮನೆಯಲ್ಲಿ ನಿಧನರಾದರು.

ನಾಲ್ಕು ಮಂದಿ ಪುತ್ರರು ಮತ್ತು 6 ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಹಂಡೇಲು ಮುಹಿಯ್ಯುದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿದ್ದ ಅವರು ಜಮಾಅತ್‌ನ ಮಾರ್ಗದರ್ಶಕ ಹಾಗೂ ಸಮಸ್ತ ಅಭಿಮಾನಿಯಾಗಿದ್ದರು.

ಶುಕ್ರವಾರ ಪೂ.11ಕ್ಕೆ ಹಂಡೇಲು ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್