ಲಕ್ಷ್ಮಣ ನಾರಾಯಣ ನಾಯಕ್

Update: 2024-10-17 12:29 GMT

ಉಡುಪಿ, ಅ.17: ರೆಂಜಾಳ ನಾಯಕ್ ಕುಟುಂಬದ ಹಿರಿಯರಾದ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ (76) ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, 2 ಪುತ್ರರು, ಪುತ್ರಿ, ಮೊಮ್ಮಕ್ಕಳು ಸಹಿತ ಅಪಾರ ಬಾಂಧವರನ್ನು ಅಗಲಿದ್ದಾರೆ.

55ಕ್ಕೂ ಅಧಿಕ ಕಾಲ ದಿನಸಿ ಅಂಗಡಿ, ಹೋಟೆಲ್ ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿದ್ದ ಅವರು ರೆಂಜಾಳ ಲಕ್ಷ್ಮಣೆರ್ ಎಂದೇ ಜನಪ್ರಿಯ ರಾಗಿದ್ದರು. ಪ್ರಗತಿಪರ ಕೃಷಿಕರೂ, ಆಸ್ಪತ್ರೆ ಇಲ್ಲದ ತಮ್ಮ ಕುಗ್ರಾಮದಲ್ಲಿ ನಾಟಿ ವೈದ್ಯರಾಗಿಯೂ ಜನಪ್ರಿಯರಾಗಿದ್ದರು. ಅದರಲ್ಲೂ ಜಾಂಡಿಸ್ (ಕಾಮಾಲೆ), ಸರ್ಪಸುತ್ತಿನಂತಹ ಕಾಯಿಲೆಗಳಿಗೆ ಉಚಿತವಾಗಿ ಔಷಧ ನೀಡುತಿದ್ದರು. ತಮ್ಮ ಸ್ವಂತ ಸ್ಥಳವನ್ನು ಸರಕಾರಿ ಅಂಗನವಾಡಿ ಶಾಲಾ ಕಟ್ಟಡಕ್ಕೆ ಉಚಿತವಾಗಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್