ಸಯ್ಯದ್ ಮುಹಮ್ಮದ್ ಹುಸೇನ್

Update: 2024-10-20 15:07 GMT

ಮಂಗಳೂರು: ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಕ್ರಾಸಿಂಗ್ ಬಳಿಯ ನಿವಾಸಿ ಸಯ್ಯದ್ ಮುಹಮ್ಮದ್ ಹುಸೇನ್ (89) ಶನಿವಾರ ನಿಧನರಾದರು. ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಮೃತರು ಅಗಲಿದ್ದಾರೆ.

ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಇವರು ಬಳಿಕ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ ಯಾಗಿ ನಂತರ ವಾಮಂಜೂರಿನ ಸರಕಾರಿ ಕ್ಷಯ ರೋಗ ಆಸ್ಪತ್ರೆಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ಮಂಗಳೂರು ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿ ಬೋಳಾರದ ಶಾದಿ ಮಹಲ್ ನಿರ್ಮಾಣ, ನಿರ್ವಹಣೆ ಯಲ್ಲಿ ತೊಡಗಿಸಿಕೊಂಡಿದ್ದರು. ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣ, ಆರೋಗ್ಯ, ಉದ್ಯೋಗ, ಅನಾಥರ ರಕ್ಷಣೆಗೆ ನೆರವಾಗು ತ್ತಿದ್ದರು. ತನ್ನ ಪಿಂಚಣಿಯ ಶೇ.50 ಭಾಗವನ್ನು ಸಮಾಜ ಸೇವೆಗೆ ವ್ಯಯಿಸುತ್ತಿದ್ದರು ಎನ್ನಲಾಗಿದೆ. ಮೃತರ ದಫನ ಕ್ರಿಯೆಯು ಬೋಳಾರದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಖಬರಸ್ತಾನದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್